fbpx
ಮನೋರಂಜನೆ

ಸ್ಯಾಂಡಲ್‌ವುಡ್‌ಗೆ ಐಟಿ ಶಾಕ್- ರಾಕ್​ಲೈನ್​ ಮನೆಯಲ್ಲಿ 2 ಕೆಜಿ ಚಿನ್ನ, 20 ಕೆಜಿ ಬೆಳ್ಳಿ ಪತ್ತೆ!

ಕನ್ನಡ ಚಿತ್ರರಂಗಕ್ಕೆ ಇಂದು ಬೆಳ್ಳಂಬೆಳಿಗ್ಗೆಯೇ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ತೆರಿಗೆ ಇಲಾಖೆ‌ ಅಧಿಕಾರಿಗಳು ಸ್ಯಾಂಡಲ್​​ವುಡ್​​​ನ ಹಲವು ನಟ, ನಿರ್ಮಾಪಕರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಕಿಚ್ಚಾ ಸುದೀಪ್, ಪುನೀತ್ ರಾಜ್‍ಕುಮಾರ್, ರಾಕ್​​​ಲೈನ್ ವೆಂಕಟೇಶ್, ಶಿವರಾಜಕುಮಾರ್, ಯಶ್ ಮತ್ತು ದಿ ವಿಲನ್ ನಿರ್ಮಾಪಕ ಮನೋಹರ್ ಹಾಗೂ ಕೆಜಿಎಫ್​ ನಿರ್ಮಾಪಕ ವಿಜಯ್ ಕಿರಗಂದೂರು ಅವರ ಮನೆ ಮೇಲೆ ಐಟಿ ರೇಡ್​​​ ನಡೆದಿದೆ. ಸುಮಾರು ಹತ್ತು ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮಹಾಲಕ್ಷ್ಮೀ ಲೇಔಟ್ ಹತ್ತಿರ ಇರುವ ರಾಕ್​ಲೈನ್​ ವೇಂಟಕೇಶ್​ ಮನೆ ಮೇಲೆ 8 ಅಧಿಕಾರಿಗಳ ತಂಡ ದಾಳಿ ನಡೆಸಿದ್ದು ಸದ್ಯ ಅಧಿಕಾರಿಗಳು ಮನೆಯಲ್ಲಿರುವ ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ. ಪರೀಶೀಲನೆ ವೇಳೆ 2 ಕೆಜಿಯಷ್ಟು ಚಿನ್ನಾಭರಣ. 20 ಕೆಜಿಗೂ ಹೆಚ್ಚು ಬೆಳ್ಳಿಯ ಸಾಮಾಗ್ರಿಗಳು ಪತ್ತೆಯಾಗಿವೆ. ಅಷ್ಟೇ ಅಲ್ಲದೇ ನೆಲಮಂಗಲ, ದೇವನಹಳ್ಳಿ, ಪೀಣ್ಯ ಬಳಿಯ ಎಕರೆಗಟ್ಟಲೆ ಜಾಗದ ದಾಖಲೆಗಳು ಕೂಡಾ ಪತ್ತೆಯಾಗಿವೆ.

2016, 2017 ಹಾಗೂ 20118ರ ಆದಾಯ ತೆರಿಗೆಯನ್ನ ಪರಿಶೀಲನೆ ನಡೆಸ್ತಿರೋ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, SBI, HCBC, ICICI ಬ್ಯಾಂಕ್ ನ ಖಾತೆಗಳ ಬಗ್ಗೆಯೂ ಮಾಹಿತಿ ಪಡೆದಿದ್ದಾರೆ. ಮೊದಲು 8 ಆದಾಯ ತೆರಿಗೆ ಅಧಿಕಾರಿಗಳು ದಾಳಿಯಲ್ಲಿ ಭಾಗಿಯಾಗಿದ್ದು, ಬಳಿಕ ಇಬ್ಬರು ಐಟಿ ಅಧಿಕಾರಿಗಳ ಬಂದು ಪರಿಶೀಲನೆ ನಡೆಸಿದ್ದಾರೆ.

ಇನ್ನೂ ಎಲ್ಲೆಲ್ಲಿ ದಾಳಿ:
ಜೆಪಿ ನಗರದ ಪುಟ್ಟೇನಹಳ್ಳಿಯಲ್ಲಿರುವ ಸುದೀಪ್​ ಮನೆಗೆ ಬೆಳಗ್ಗೆ 7 ಗಂಟೆಗೆ ಎಲ್ಲೋ ಬೋರ್ಡ್​ ಕಾರ್​ನಲ್ಲಿ ಆಗಮಿಸಿದ ಐಟಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಒಂದರ ಹಿಂದೆ ಒಂದು ಸೂಪರ್ ಹಿಟ್ ಚಿತ್ರಗಳು, ಜಾಹಿರಾತು ಹಾಗೂ ಬಿಗ್​ ಬಾಸ್​​ ಕಾರ್ಯಕ್ರಮ ನಿರೂಪಣೆ ಹಾಗೂ ಹಲವು ಬ್ಯುಸಿನೆಸ್​ ಹೊಂದಿರುವ ಸುದೀಪ್​​​ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಇನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮನೆ ಮೇಲೆಯೂ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಾಗಾವರದ ಮಾನ್ಯತಾ ಟೆಕ್ ಪಾರ್ಟ್ ಬಳಿಕ ಶಿವರಾಜ್ ಕುಮಾರ್ ನಿವಾಸ ಮೇಲೆ ಐಳಿ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಶಿವಣ್ಣನ ಶ್ರೀಮುತ್ತು ಮನೆಯಲ್ಲಿರುವ ದಾಖಲೆಗಳನ್ನ ಪರಿಶೀಲನೆ ಮಾಡಲಾಗುತ್ತಿದೆ. ಎರಡು ಖಾಸಗಿ ವಾಹನಗಳಲ್ಲಿ ಬಂದ ಅಧಿಕಾರಿಗಳು ಪುನೀತ್ ಮನೆಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.

ಇನ್ನು ಸದಾಶಿವ ನಗರದಲ್ಲಿರುವ ನಟ ಪುನೀತ್ ರಾಜ್​ಕುಮಾಮಾರ್ ಮನೆ ಮೇಲೆ ಕೂಡ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ​ ಮಾಡಿದ್ದಾರೆ. ನಾಗರಬಾವಿಯ ವಿಜಯ್ ಕಿರಗಂದೂರು ನಿವಾಸ ಹಾಗೂ ಎಚ್ಎಸ್ಆರ್ ಲೇಔಟ್ ನಲ್ಲಿರುವ ಮನೋಹರ್ ನಿವಾಸದ ಮೇಲೆ ದಾಳಿ ನಡೆದಿದೆ. ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ದಾಳಿ ನಡೆದಿರುವ ಎಲ್ಲಾ ಕಡೆಗಳಲ್ಲೂ ಸದ್ಯ ಅಧಿಕಾರಿಗಳು ದಾಖಲೆಗಳನ್ನು ಪರೀಶೀಲಿಸುತ್ತಿದ್ದು ಏನೆಲ್ಲಾ ಸರಿಯಾದ ರೀತಿಯಲ್ಲಿ ಆದಾಯ ತೆರಿಗೆಯನ್ನು ಪಾವತಿ ಮಾಡಿದ್ದಾರಾ ಎಂದು ಪರೀಕ್ಷೆ ಮಾಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top