fbpx
ಸಮಾಚಾರ

ಈ ವರ್ಷದಲ್ಲಿದೆ ಬರೋಬ್ಬರಿ 5 ಗ್ರಹಣಗಳು!

ಗ್ರಹಣವೂ ಒಂದು ಬಾಹ್ಶಾಕಾಶದವಸ್ತುವು ಮತ್ತೊಂದರ ನೆರಳಿನಲ್ಲಿ ಚಲಿಸಿದಾಗ ಉಂಟಾಗುವ ಒಂದು ಖಗೋಳಶಾಸ್ತ್ರೀಯ ಘಟನೆಯಾಗಿದ್ದು . ಗ್ರಹಣ ಪದವನ್ನು ಹಲವುವೇಳೆ, ಒಂದು ಸೂರ್ಯಗ್ರಹಣ (ಚಂದ್ರನ ನೆರಳು ಭೂಮಿಯ ಮೇಲ್ಮೈಯನ್ನು ಹಾದುಹೋಗುವ ಘಟನೆ), ಅಥವಾ ಒಂದು ಚಂದ್ರಗ್ರಹಣವನ್ನು (ಚಂದ್ರವು ಭೂಮಿಯ ನೆರಳಿನಲ್ಲಿ ಚಲಿಸುವ ಘಟನೆ) ವಿವರಿಸಲು ಬಳಸಲಾಗುತ್ತದೆ.

ಇದೀಗ ಗ್ರಹಣಗಳಿಗೆ ಸಂಬಂಧ ಪಟ್ಟಂತೆಯೇ ಈ ವರ್ಷದಲ್ಲಿ ಅಂದರೆ 2019 ರಲ್ಲಿ ನಾವು ನೀವೆಲ್ಲರೂ 5 ಗ್ರಹಣಗಳಿಗೆ ಸಾಕ್ಷಿಯಾಗಲಿದ್ದೇವೆ.

ಹೌದು, ಆದರೆ ನಾವು ಗಮನಿಸಬೇಕಾದ ಸಂಗತಿ ಏನೆಂದರೆ, ಒಟ್ಟು 5 ಗ್ರಹಣಗಳಲ್ಲಿ ಎರಡು ಪೂರ್ಣ ಚಂದ್ರ ಗ್ರಹಣಗಳಾಗಿದ್ದು ಹಾಗೂ ಉಳಿದ ಮೂರು ಭಾಗಶಃ ಸೂರ್ಯಗ್ರಹಣಗಳಾಗಿವೆ. ಜನವರಿ 6 ಕ್ಕೆ ಮೊದಲ ಸೂರ್ಯ ಗ್ರಹಣವಿದ್ದು ಹಾಗೂ ಜುಲೈ 2 ಕ್ಕೆ ಎರಡನೇ ಸೂರ್ಯ ಗ್ರಹಣವಿದ್ದು ಇವೆರೆಡು ಕೂಡ ಭಾರತದಲ್ಲಿ ಕಾಣಿಸುವುದಿಲ್ಲ ಎಂದು ತಿಳಿದು ಬಂದಿದೆ.

ಆದರೆ ಡಿ.26 ಕ್ಕೆ ಇರುವ ಮೂರನೇ ಸೂರ್ಯಗ್ರಹಣ ಮಾತ್ರ ಭಾರತದಲ್ಲಿ ಕಾಣಿಸಲಿದ್ದು . ಜನವರಿ 21 ಕ್ಕೆ ನಡೆಯುವ ಮೊದಲ ಚಂದ್ರಗ್ರಹಣ ಭಾರತದಲ್ಲಿ ಕಾಣಿಸುವುದಿಲ್ಲ ಆದರೆ ಜುಲೈ 16 ಕ್ಕೆ ನಡೆಯುವ 2 ನೇ ಚಂದ್ರಗ್ರಹಣ ಭಾರತದಲ್ಲಿ ಕಾಣಿಸಿಕೊಳ್ಳುತ್ತದೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top