fbpx
ಸಮಾಚಾರ

ಮೇಕೆದಾಟು ಯೋಜನೆಗೆ ವಿರೋಧ- ತಮಿಳುನಾಡಿನ 24 ಎಐಎಡಿಎಂಕೆ ಸಂಸದರ ಅಮಾನತು.

ನೀರಿನ ವಿಚಾರದಲ್ಲಿ ಕರ್ನಾಟಕದ ವಿರುದ್ಧ ಕಿತಾಪತಿ ತೆಗೆಯುವುದು ತಮಿಳುನಾಡಿಗೆ ಹೊಸ ವಿಚಾರವೇನಲ್ಲ. ತಮಿಳುನಾಡು ಮತ್ತು ಕರ್ನಾಟಕದ ನಡುವೆ ಹೊತ್ತಿಕೊಂಡಿರುವ ಕಾವೇರಿ ಜಲವಿವಾದಕ್ಕೆ ಸುದೀರ್ಘವಾದೊಂದು ಇತಿಹಾಸವೇ ಇದೆ.. ಕಾವೇರಿ ವಿಚಾರದಲ್ಲಿ ಮಾತ್ರವಲ್ಲದೆ ಇದೀಗ ಮೇಕೆದಾಟು ಆಣೆಕಟ್ಟು ಯೋಜನೆಯ ವಿಷಯದಲ್ಲೂ ತಮಿಳು ನಾಡಿ ಇದೇ ರೀತಿ ವರ್ತಿಸುತ್ತಿದೆ.

ಮೇಕೆದಾಟು ಯೋಜನೆಗೆ ತಮಿಳುನಾಡು ಮತ್ತೆ ವಿರೋಧ ವ್ಯಕ್ತಪಡಿಸಿದೆ. ಯೋಜನೆ ವಿಚಾರ ಮುಂದಿಟ್ಟುಕೊಂಡು ಲೋಕಸಭೆ ಕಲಾಪಕ್ಕೆ ಅಡ್ಡಿ ಪಡಿಸಿದ 26 ಎಐಎಡಿಎಂಕೆ ಪಕ್ಷದ ಸಂಸದರನ್ನು ಐದು ದಿನಗಳವರೆಗೆ ಅಮಾನತು ಮಾಡಲಾಗಿದೆ. ಸಭ್ಯತೆಯ ನಿಯಮ ಮೀರಿ ಸದನದಲ್ಲಿ ಗದ್ದಲ ನಡೆಸಿದ್ದರಿಂದ ಶಿಸ್ತು ಕ್ರಮದ ಭಾಗವಾಗಿ ಸ್ಪೀಕರ್‌ ಸುಮಿತ್ರಾ ಮಹಾಜನ್‌, ಮುಂದಿನ ಐದು ದಿನದ ಕಲಾಪಗಳಿಂದ ಈ ಸಂಸದರನ್ನು ಅಮಾನತುಗೊಳಿಸಿದ್ದಾರೆ.

ಮೇಕೆದಾಟು ಯೋಜನೆಗೆ ಕೇಂದ್ರ ಜಲಸಂಪನ್ಮೂಲ ಇಲಾಖೆ ಅನುಮತಿ ನೀಡಿರುವುದನ್ನು ವಿರೋಧಿಸಿದ್ದ ತಮಿಳುನಾಡು ಸರ್ಕಾರ ಈ ಯೋಜನೆಗೆ ತಡೆ ಕೋರುವಂತೆ ಪ್ರಧಾನಿಗೆ ಪತ್ರ ಬರೆದಿದ್ದರು. ಅಲ್ಲದೇ, ಚಳಿಗಾಲ ಅಧಿವೇಶನ ವೇಳೆಯೂ ಪ್ರತಿಭಟನೆ ನಡೆಸಿದ್ದರು.

ಆರಂಭದಲ್ಲಿ ಸಂಸತ್‌ ಕಲಾಪ ಸುಗಮವಾಗಿ ಸಾಗಲು ಅನುವು ಮಾಡುತ್ತೇವೆ ಎಂದು ಎಐಎಡಿಎಂಕೆ ಸದಸ್ಯರು ಒಪ್ಪಿದರಾದರೂ, ನಂತರ ತಮ್ಮ ಪಕ್ಷದ ಮುಖ್ಯಸ್ಥರು ಈ ಆಶ್ವಾಸನೆಗಳಿಗೆ ಒಪ್ಪಿಲ್ಲ ಎಂದು ತಗಾದೆ ತೆಗೆದಿದ್ದಾರೆ. ‘ಈಗ ಚುನಾವಣೆ ಸಮೀಪಿಸುತ್ತಿದೆ. ಬಿಜೆಪಿ ಕರ್ನಾಟದಲ್ಲಿ ಹಲವು ಕ್ಷೇತ್ರಗಳನ್ನು ಗೆಲ್ಲುವ ಯೋಜನೆ ಹಾಕಿಕೊಂಡಿದೆ. ಆದ್ದರಿಂದ, ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡಿದೆ’ ಎಂದು ತಮಿಳುನಾಡು ಸಂಸದರು ಆರೋಪಿಸಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top