fbpx
ಸಮಾಚಾರ

ಮನೆ ಬಾಡಿಗೆ ವಿವಾದ -ಹೈಕೋರ್ಟ್​​ನ ಸೂಚನೆಯಂತೆ ಹಣ ಪಾವತಿಗೆ ಒಪ್ಪಿಕೊಂಡ ಯಶ್ ಫ್ಯಾಮಿಲಿ.

ವರ್ಷಾಂತರಗಳಿಂದ ವಾಸಿಸಿದ್ದ ಮನೆಯ ಬಾಡಿಗೆ ಕಟ್ಟದೆ ಸತಾಯಿಸಿದ, ಕೇಳಲು ಹೋದ ಮಾಲೀಕರಿಗೇ ರೋಪು ಹಾಕಿದ ಆರೋಪವೊಂದು ವರ್ಷಗಳ ಹಿಂದೆ ಯಶ್ ವಿರುದ್ಧ ಕೇಳಿ ಬಂದಿತ್ತಲ್ಲಾ? ಇದೀಗ ಈ ಕೇಸ್ ಅಂತ್ಯ ಕಾಣುವ ಹಂತಕ್ಕೆ ತಲುಪಿದೆ. ಹೈಕೋರ್ಟ್​​ನ ಸೂಚನೆಯಂತೆ ಮನೆಯ ಮಾಲೀಕರಿಗೆ 23 ಲಕ್ಷ ಬಾಡಿಗೆ ಹಣ ನೀಡಲು ಯಶ್​ ಕುಟುಂಬ ಒಪ್ಪಿಕೊಂಡಿದೆ.

ನಗರದ ಬನಶಂಕರಿ ಮೂರನೇ ಹಂತದ ಮೂರನೇ ಬ್ಲಾಕ್‌ನ 6ನೇ ಕ್ರಾಸ್‌ಲ್ಲಿ 30X40ರ ಅಳತೆಯಲ್ಲಿರುವ ಮನೆಯನ್ನು ಖಾಲಿ ಮಾಡಲು ನಿರಾಕರಿಸಿ ಕೋರ್ಟ್‌ ಮೆಟ್ಟಿಲೇರಿದ್ದ ಯಶ್‌ ಅವರ ತಾಯಿ ಎ.ಪುಷ್ಪಾ, ಬಾಕಿ ಮೊತ್ತದ ಡಿ.ಡಿಯನ್ನು (ಡಿಮ್ಯಾಂಡ್‌ ಡ್ರಾಫ್ಟ್‌) ಕೊಡಲಿದ್ದಾರೆ. ಅಂತೆಯೇ 2019ರ ಮಾರ್ಚ್‌ 31ರೊಳಗೆ ಮನೆಯನ್ನು ಖಾಲಿ ಮಾಡಲಿದ್ದಾರೆ’ ಎಂದು ಮನೆಯ ವಾರಸುದಾರರ ಪರ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದ ಹಿರಿಯ ವಕೀಲ ಎಂ.ಟಿ.ನಾಣಯ್ಯ

ಬಾಡಿಗೆ ಮನೆಯನ್ನು ಬಿಡುವುದಿಲ್ಲ ಎಂದು ಯಶ್ ರಚ್ಚೆ ಹಿಡಿಯುತ್ತಲೇ ಮನೆ ಮಾಲೀಕ ಮುನಿಪ್ರಸಾದ್ ಕೋರ್ಟ್ ಮೆಟ್ಟಿಲೇರಿದ್ದರು. ಈ ಬಗ್ಗೆ ಸವಿಸ್ತಾರವಾದ ವಿಚಾರಣೆ ನಡೆಸಿದ ಬೆಂಗಳೂರಿನ ೪೨ನೇ ಸಿಟಿ ಸಿವಿಲ್ ಕೋರ್ಟ್ ಯಶ್ ತಾಯಿ ಪುಷ್ಪ ಅವರಿಗೆ ಕೆಲ ತಿಂಗಳ ಹಿಂದೆಯಷ್ಟೇ ಮನೆಯನ್ನು ಮಾಲೀಕರಿಗೆ ಬಿಟ್ಟು ಕೊಡುವಂತೆ ಆದೇಶ ನೀಡಿತ್ತು. ಅಷ್ಟೇ ಅಲ್ಲದೇ ಬಾಕಿ ಹಣವನ್ನು ಪಾವತಿಸುವಂತೆ ತಾಕೀತು ಮಾಡಿದೆ.. ಆದರೆ ಈ ತೀರ್ಪನ್ನು ಪ್ರಶ್ನಿಸಿ ಯಶ್ ತಾಯಿ ಹಾಯ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಕೂಡ ಕೆಳ ನ್ಯಾಯಾಲಯದ ಆದೇಶವನ್ನೇ ಎತ್ತಿ ಹಿಡಿದಿತ್ತು…

​ “ಬಾಡಿಗೆ ಕಟ್ಟಿ, ಇಲ್ಲದಿದ್ದರೆ ಮನೆ ಖಾಲಿ ಮಾಡಿ” ಎಂದು ಯಶ್​ ತಾಯಿಗೆ ಸೂಚಿಸಿದೆ. ಇಂದು ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಬಾಕಿಯಿರುವ 23 ಲಕ್ಷ ರೂ ಬಾಡಿಗೆ ಹಣವನ್ನು ನೀಡುವಂತೆ ಯಶ್ ತಾಯಿಗೆ ಸೂಚನೆ ನೀಡಿದ್ದು ತಕ್ಷಣ ಪಾವತಿಸಿದರೆ, ಮುಂದಿನ ವರ್ಷ ಮಾರ್ಚ್ 31ರವರೆಗೆ ಅದೇ ಮನೆಯಲ್ಲಿ ಮುಂದುವರೆಯ ಅವಕಾಶ ಸಿಗುತ್ತದೆ. ಇಲ್ಲವದಲ್ಲಿ ಡಿಸೆಂಬರ್ ಹೊತ್ತಿಗೆ ಮನೆಯನ್ನು ಖಾಲಿ ಮಾಡಬೇಕು ಎಂದು ನ್ಯಾ. ಬೋಪಣ್ಣ, ನ್ಯಾ. ಶ್ರೀನಿವಾಸ್ ಹರಿಕುಮಾರ್ ಅವರಿದ್ದ ವಿಭಾಗೀಯ ಪೀಠ ಆದೇಶ ನೀಡಿತ್ತು.

ಏನಿದು ಪ್ರಕರಣ..?
ನಂ.೭೫೫, ೫ ನೇ ಕ್ರಾಸ್, ೩ ನೇ ಬ್ಲಾಕ್, ೩ ನೇ ಹಂತ, ಬನಶಂಕರಿಯಲ್ಲಿರುವ ಮನೆಯನ್ನು ೨೦೧೦ರಲ್ಲಿ ತಿಂಗಳಿಗೆ ೪೦ ಸಾವಿರ ರೂ ಬಾಡಿಗೆ ನೀಡುವುದಾಗಿ ಯಶ್ ತಾಯಿ ಪುಷ್ಪಾ ಅವರು ಒಪ್ಪಂದ ಮಾಡಿಕೊಂಡಿದ್ದರು. ಆದರೆ ಕಳೆದ ಒಂದೆರಡು ವರ್ಷಗಳಿಂದ ಬಾಡಿಗೆ ನೀಡುತ್ತಿಲ್ಲ. ಹೀಗಾಗಿ ಮನೆ ಮಾಲೀಕರಾದ ಡಾ.ಮುನಿಪ್ರಸಾದ್ ಮತ್ತು ವನಜಾ ಅವರು ಬಾಡಿಗೆ ನೀಡುವಂತೆ ಕೇಳುತ್ತಿದ್ದರೂ ಕಿವಿಗೇ ಹಾಕಿಕೊಳ್ಳದೇ ಕಾಲ ದೂಡುತ್ತಿದ್ದಾರೆ ಎಂಬುದು ಯಶ್ ಮೇಲಿರುವ ಆರೋಪದ ಸಂಕ್ಷಿಪ್ತ ತಿರುಳು.

2010ರ ಅಕ್ಟೋಬರ್‌ನಲ್ಲಿ ಯಶ್ ಅವರ ಕುಟುಂಬಕ್ಕೆ ಮನೆಯನ್ನು 11 ತಿಂಗಳ ಅವಧಿಗೆಂದು ಭೋಗ್ಯಕ್ಕೆ ನೀಡಲಾಗಿತ್ತು. 2011ರಲ್ಲಿ ಭೋಗ್ಯದ ಅವಧಿ ಮುಗಿದ ನಂತರ ಬಾಡಿಗೆ ನೀಡಬೇಕಿತ್ತು ಆದರೆ ಬಾಡಿಗೆಯನ್ನೂ ನೀಡದೆ ಮನೆಯನ್ನೂ ಖಾಲಿ ಮಾಡದೆ ಸುಮಾರು 21.37 ಲಕ್ಷ ರೂ. ಬಾಡಿಗೆ ಉಳಿಸಿಕೊಂಡಿದ್ದಾರೆ. ಬಾಡಿಗೆ ಕೊಡಿ ಎಂದು ಕೇಳಿದರೆ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂದು ಮುನಿಪ್ರಸಾದ್ ಆರೋಪಿಸಿದ್ದರು.

ಆ ವೇಳೆ “ಬಾಡಿಗೆ ಕೊಡುವುದಿಲ್ಲ ಎಂದು ನಾವು ಯಾವತ್ತೂ ಹೇಳಿಲ್ಲ. ಮನೆ ಮಾಲೀಕರೇ ಬಾಡಿಗೆ ಪಡೆಯಲು ಬಂದಿಲ್ಲ. ಬಾಡಿಗೆ ಕಟ್ಟಲು ನಾವು ಸಿದ್ಧರಿದ್ದೇವೆ. ಮನೆ ಖಾಲಿ ಮಾಡಲು ಕಾಲಾವಕಾಶ ಕೇಳಿದ್ದೆವು ಅಷ್ಟೇ, ಬೆದರಿಕೆ ಹಾಕಿಲ್ಲ.” ಎಂದು ಯಶ್ ತಾಯಿ ಹೇಳಿಕೆ ಕೊಟ್ಟಿದ್ದರು.. ಈ ಪ್ರಕರಣ ನ್ಯಾಯಾಲದಲ್ಲಿ ನಡೆಯುತ್ತಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top