fbpx
ಮನೋರಂಜನೆ

ಕೊನೆಗೂ ಸಿಕ್ಕಿ ಬಿದ್ದರು ಎಸ್.ಅರವಿಂದ್ ಬುಲೆಟ್ ಬೈಕ್ ಕದ್ದ ಖದೀಮರು.

ಐಪಿಎಲ್ ಮಾಜಿ ಆಟಗಾರ ಮತ್ತು ಪ್ರಸಕ್ತ ಕರ್ನಾಟಕ ರಣಜಿ ತಂಡದ ಕೋಚ್ ಎಸ್. ಅರವಿಂದ್ ಅವರ ರಾಯಲ್ ಏನ್‍ಫೀಲ್ಡ್ ಬೈಕ್ ಕದ್ದಿದ್ದ ಇಬ್ಬರು ಕಳ್ಳರು ಕಡೆಗೂ ಪೋಲೀಸರ ಅಥಿತಿಗಳಾಗಿದ್ದಾರೆ. ರಾಯಲ್ ಎನ್‍ಫೀಲ್ಡ್ ಹಾಗೂ ಡ್ಯೂಕ್ ಬೈಕ್‍ಗಳಂತ ದುಬಾರಿ ಬೈಕುಗಳನ್ನೇ ನೋಡಿಕೊಂಡು ಕದಿಯುತ್ತಿದ್ದ ಇಬ್ಬರು ಕಳ್ಳರನ್ನು ಯಶವಂತಪುರ ಠಾಣೆಯ ಪೊಲೀಸರು ಹೆಡೆಮುರಿ ಕಟ್ಟಿ ಎಳೆದು ತಂದಿದ್ದಾರೆ..

ಬಂಧಿತ ಕದೀಮರನ್ನು ಆಂಧ್ರದ ಚಿತ್ತೂರು ಮೂಲದ ಅಬ್ದುಲ್ ವಾಹಿದ್ ಹಾಗೂ ಅಬ್ರಾರ್ ಎಂದು ಗುರುತಿಸಲಾಗಿದೆ. ಇನ್ನು ಬಂಧಿತ ಆರೋಪಿಗಳಿಂದ 19 ದುಬಾರಿ ಬೈಕ್‍ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.. ಕೇವಲ ಅರವಿಂದ್ ಅವರ ಬೈಕ್ ಮಾತ್ರವಲ್ಲದೇ ಬೆಂಗಳೂರಿನ ಹಲವೆಡೆ ಬೈಕ್ ಕಳ್ಳತನ ಮಾಡಿದ್ದ ಈ ಖದೀಮರನ್ನು ನಗರದ ಹಲವು ಠಾಣೆಯ ಪೊಲೀಸರು ಹುಡುಕಾಡುತ್ತಿದ್ದರು.

ಇತ್ತೀಚಿಗೆ ಸುಮಾರು ಇಪ್ಪತ್ತು ದಿನಗಳ ಹಿಂದೆ ಅರವಿಂದ್ ಅವರ ಮನೆ ಮುಂದೆ ನಿಲ್ಲಿಸಿದ ಬೈಕ್ ಕಳ್ಳತನವಾಗಿತ್ತು.. ಕಳ್ಳತನವಾಗುವ 10 ದಿನಗಳ ಮುಂಚೆಯಷ್ಟೇ ಅರವಿಂದ್ ಅವರು ಹೊಸತಾಗಿ ರಾಯಲ್ ಎನ್‍ಫೀಲ್ಡ್ ಬೈಕ್ ಖರೀದಿಸಿದ್ದರು.. ಹೊಸ ಬೈಕ್ ಅನ್ನು ಕಳೆದುಕೊಂಡು ಬೇಸರಗೊಂಡಿದ್ದ ಅರವಿಂದ್ ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿಗಳು ಇಬ್ಬರು ಕಳೆದ 40 ದಿನಗಳಲ್ಲಿ 20 ಕ್ಕೂ ಹೆಚ್ಚು ಬೈಕ್‍ಗಳನ್ನು ಕಳವು ಮಾಡಿದ್ದಾರೆ ಎಂದು ಹೇಳಲಾಗಿದ್ದು ಈ ಬಗ್ಗೆ ಯಶವಂತಪುರ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top