fbpx
ಸಮಾಚಾರ

‘ಗೋರಕ್ಷಣೆ ಹೆಸರಿನಲ್ಲಿ ನಡೆಯುವ ಗುಂಪು ಹತ್ಯೆಗಳು ಸಂಪೂರ್ಣ ಖಂಡನಾರ್ಹ’ ಎಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ

ಹೊಸ ವರ್ಷದ ಮೊದಲ ದಿನವೇ ಖಾಸಗಿ ಸುದ್ದಿ ಸಂಸ್ಥೆಯೊಂದಿಗಿನ ಸಂದರ್ಶನದಲ್ಲಿ ಭಾಗವಹಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ಅನೇಕ ವಿಷಯಗಳ ಬಗ್ಗೆ ತಮಗಿರುವ ಸ್ಪಷ್ಟ ನಿಲುವನ್ನು ಮಂಡಿಸಿದರು.

ಹೌದು, ಖಾಸಗಿ ಸುದ್ದಿ ಸಂಸ್ಥೆಯೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು , “ಗೋರಕ್ಷಣೆ ಹೆಸರಿನಲ್ಲಿ ನಡೆಯುವ ಗುಂಪು ಹತ್ಯೆಗಳು ಸಂಪೂರ್ಣ ಖಂಡನಾರ್ಹ. ಇಂತಹ ಕೃತ್ಯಗಳನ್ನು ಯಾರೂ ಬೆಂಬಲಿಸಬಾರದು. ಇದು ಸಂಪೂರ್ಣ ತಪ್ಪು” ಎಂದು ನೇರವಾಗಿ ನುಡಿದರು.

ಮುಂದುವರೆದು ಗುಂಪುಹತ್ಯೆಗಳಿಂದ ದೇಶದಲ್ಲಿ ಅಲ್ಪಸಂಖ್ಯಾತರು ಅಸುರಕ್ಷಿತ ಭಾವನೆಯಲ್ಲಿದ್ದಾರೆ ಎಂಬ ನಾಸಿರುದ್ದೀನ್ ಶಾ ಅವರ ಹೇಳಿಕೆಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರು , “ಅಜೆಂಡಾಗಳ ಕಾರಣದಿಂದ ಕೆಲವರು ಚುನಾವಣೆಯ ಸಮಯ ಅಸುರಕ್ಷಿತ ಭಾವನೆ ಇದೆ ಎನ್ನುತ್ತಾರೆ” ಎಂದು ಹೇಳಿದರು.

ಇದೆ ವಿಷಯವನ್ನು ಕೇಂದ್ರೀಕರಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, “2014ರಲ್ಲಿ ನಾವು ಅಧಿಕಾರಕ್ಕೆ ಬಂದ ಮೇಲೆ ಇಂತಹ ಘಟನೆಗಳು ನಡೆಯುತ್ತಿದೆಯೇ?” ಎಂದು ಸಂದರ್ಶಕರನ್ನು ಮರು ಪ್ರಶ್ನಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top