fbpx
ಸಮಾಚಾರ

ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರ- ತಟಸ್ಥ ನಿಲುವ ತಾಳಿದ ಪೇಜಾವರ ಶ್ರೀಗಳು.

ಅಯ್ಯಪ್ಪ ಸ್ವಾಮಿ ಭಕ್ತರ ತೀವ್ರ ಪ್ರತಿಭಟನೆ ಹೊರತಾಗಿಯೂ 50 ವರ್ಷದೊಳಗಿನ ಇಬ್ಬರು ಮಹಿಳೆಯರು ಇಂದು ಮುಂಜಾನೆ ಶಬರಿಮಲೆಯಲ್ಲಿ ದರ್ಶನ ಪಡೆದಿದ್ಜಾರೆ 40 ವರ್ಷ ವಯಸ್ಸಿನ ಇಬ್ಬರು ಮಹಿಳೆಯರು ಇಂದು ಬೆಳಗ್ಗೆ ಸುಮಾರು 3.45ರ ವೇಳೆಯಲ್ಲಿ ಶಬರಿ ಗಿರಿಗೆ ತೆರಳಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ದರ್ಶನ ಪಡೆದ ಮಹಿಳೆಯರನ್ನು ಮಲಪ್ಪುರಂನ ಕನಕ ದುರ್ಗ ಮತ್ತು ಕಲ್ಲಿಕೋಟೆಯ ಬಿಂದು ಎಂದು ಗುರುತಿಸಲಾಗಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಮೇರೆಗೆ ಇಬ್ಬರು ಮಹಿಳೆಯರು ದೇಗುಲ ಪ್ರವೇಶಿಸಿದ್ದಾರೆ. ಪ್ರತಿಭಟನೆಯ ಭೀತಿಯಿಂದ ಇಬ್ಬರೂ ಮಹಿಳೆಯರ ನಿವಾಸಗಳಿಗೆ ಪೊಲೀಸರು ಭದ್ರತೆ ಒದಗಿಸಿದ್ದಾರೆ.

ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರು ಉಡುಪಿ ಕೃಷ್ಣಮಠದ ಪೇಜಾವರ ಶ್ರೀಗಳು ಮಾತನಾಡಿದ್ದು ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ಕುರಿತು ತಾವು ತಟಸ್ಥ ನಿಲುವು ತಾಳುವುದಾಗಿ ತಿಳಿಸಿದ್ದಾರೆ. ಸುದ್ದಿಗಾರರೊಡನೆ ಮಾತನಾಡಿದ ಶ್ರೀಗಳು “ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶದ ಕುರಿತು ಶಾಸ್ತ್ರದಲ್ಲಿ ಯಾವುದೇ ಧಕ್ಕೆ ಇಲ್ಲ, ಆದರೆ ಸಂಪ್ರದಾಯದ ಅನುಸಾರ ಅಡ್ಡಿಯುಂಟು. ಶಾಸ್ತ್ರದ ಆಧಾರದ ಮೇಲೆ ಎಲ್ಲಾ ಭಕ್ತರಿಗೆ ದೇವಾಲಯ ಪ್ರವೇಶ ಮುಕ್ತವಾಗಿರುತ್ತದೆ. ಆದರೆ ಶಬರಿಮಲೆ ಸಂಪ್ರದಾಯವೇ ಬೇರಾಗಿರುವ ಕಾರಣ ನಾನು ಈ ವಿಷಯದಲ್ಲಿ ತಟಸ್ಥನಾಗಿರಲು ಬಯಸುತ್ತೇನೆ “ಎಂದಿದ್ದಾರೆ.

ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶಿಸುವುದರ ಕುರಿತು ಕೇಂದ್ರ ಸರ್ಕಾರ ಸಮಿತಿ ರಚಿಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು. ಮಹಿಳೆಯರು ಉದ್ದೇಶ ಪೂರ್ವಕವಾಗಿ ದೇವಸ್ಥಾನ ಪ್ರವೇಶ ಮಾಡಿದ್ದಾರೆ. ಅದೇ ರೀತಿ ಉದ್ದೇಶ ಪೂರ್ವಕವಾಗಿ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಅವರು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top