fbpx
ಮನೋರಂಜನೆ

ಕನ್ನಡಲ್ಲೂ ಇರಲಿದೆ ಕಣ್ಸನ್ನೆ ಚೆಲುವೆಯ ‘ಕಿರಿಕ್ ಲವ್ ಸ್ಟೋರಿ’- ಕನ್ನಡಕ್ಕೆ ಡಬ್ ಆಗ್ತಿದೆ ಮತ್ತೊಂದು ಸಿನಿಮಾ.

ಕನ್ನಡ ಚಿತ್ರರಂಗದಲ್ಲಿ ಪರಭಾಷಾ ಚಿತ್ರಗಳ ಡಬ್ಬಿಂಗ್ ಬಗೆಗಿನ ಚರ್ಚೆ, ವಾದ ವಿವಾದ ಆರಂಭವಾಗಿ ವರ್ಷಗಳೇ ಕಳೆದಿವೆ. ಡಬ್ಬಿಂಗ್‌ನಿಂದ ಸ್ಥಳೀಯ ಕಲಾವಿದರಿಗೆ ತೊಂದರೆ ಆಗುತ್ತದೆ, ಅನೇಕ ಜೂನಿಯರ್ ಆರ್ಟಿಸ್ಟ್ ಗಳು ಕೆಲಸಗಳನ್ನು ಕಳೆದುಕೊಳ್ಳುತ್ತಾರೆ ಎಂದು ಕೆಲವರು ವಾದಿಸಿದರೆ ಇನ್ನೂ ಕೆಲವರಿ ಡಬ್ಬಿಂಗ್ ಇದು ಕನ್ನಡದ ಪರ. ಪರಭಾಷಾ ಚಿತ್ರಗಳು ಕನ್ನಡದಲ್ಲೇ ಬಿಡುಗಡೆಯಾಗುವುದರಿಂದ ಕನ್ನಡವೂ ಎಲ್ಲೆಡೆ ಪಸರುತ್ತದೆ ಎಂದು ವಾದಿಸುತ್ತಾರೆ.. ಇದೀಗ ಡಬ್ಬಿಂಗ್ ಕುರಿತಾದ ಚರ್ಚೆಗೆ ಮತ್ತೆ ಜೀವ ಬಂದಿದೆ.

‘ಸೂಪರ್ ಸ್ಟಾರ್’ ರಜಿನಿಕಾಂತ್ ನಟನೆಯ ‘ಪೆಟ್ಟಾ’, ನಂದಮೂರಿ ಬಾಲಕೃಷ್ಣ ಅಭಿನಯದ ‘ಎನ್​ಟಿಆರ್; ಕಥಾನಾಯಕುಡು’ ಹಾಗೂ ರಾಮ್ ಚರಣ್ ತೇಜ ನಾಯಕತ್ವದ ‘ವಿನಯ ವಿಧೇಯ ರಾಮ’ ಚಿತ್ರಗಳು ಈ ವರ್ಷದ ಸಂಕ್ರಾಂತಿ ಹಬ್ಬಕ್ಕೆ ಕನ್ನಡದಲ್ಲಿ ತೆರೆಕಾಣಲು ಪ್ರಯತ್ನ ನಡೆಸುತ್ತಿವೆ. ಈ ಸಾಲಿಗೆ ಇದೀಗ ಮತ್ತೊಂದು ಸಿನಿಮಾ ಸೇರಿಕೊಂಡಿದೆ.

ಬರೀ ಟೀಸರ್ ಮೂಲಕವೇ ಕಳೆದ ವರ್ಷ ದೇಶಾದ್ಯಂತ ಸದ್ದು ಮಾಡಿದ್ದ ಚಿತ್ರ ಮಲಯಾಳಂನ ‘ಒರು ಅಡಾರ್ ಲವ್’. ಟೀಸರ್​ನಲ್ಲಿ ಚಿತ್ರದ ನಾಯಕಿ ಪ್ರಿಯಾ ಪ್ರಕಾಶ್ ವಾರಿಯರ್ ಅವರ ಕಣ್ಸನ್ನೆ ದೃಶ್ಯ ವೈರಲ್ ಆಗಿತ್ತು. ರಾತ್ರಿ ಬೆಳಗಾಗುವುದರೊಳಗೆ ಅವರು ಎಲ್ಲರ ಕ್ರಷ್ ಆಗಿದ್ದರು. ಸದ್ಯ ಈ ಸಿನಿಮಾ ಕೂಡ ಕನ್ನಡದಲ್ಲಿ ಮೂಡಿಬರಲಿದೆಯಂತೆ.

ಇದುವರೆಗೂ ಬರೀ ತೆಲುಗು-ತಮಿಳು ಸಿನಿಮಾಗಳು ಕನ್ನಡಕ್ಕೆ ಡಬ್ ಆಗುವುದು ಸಾಮಾನ್ಯವಾಗಿತ್ತು. ಆದರೀಗ ಮಲಯಾಳಂನ ‘ಒರು ಅಡಾರ್ ಲವ್’ ಕನ್ನಡಕ್ಕೆ ಡಬ್ ಆಗುತ್ತಿರುವುದು ವಿಶೇಷವಾಗಿದೆ. ಈ ಚಿತ್ರ ಕನ್ನಡಕ್ಕೆ ’ಕಿರಿಕ್ ಲವ್ ಸ್ಟೋರಿ’ ಎಂಬ ಹೆಸರಿನಲ್ಲಿ ಬರುತ್ತಿದೆ.ಪ್ರಿಯಾಗೆ ಜೋಡಿಯಾಗಿ ನೂರೀನ್ ಶರೀಫ್ ನಟಿಸಿದ್ದಾರೆ. ಸಂಗೀತದ ಹೊಣೆ ಶಾನ್ ರೆಹಮಾನ್ ಅವರದ್ದು. ಅಂದಹಾಗೆ ’ಒರು ಅಡಾರು ಲವ್’ ಚಿತ್ರವನ್ನು ಒಮರ್ ಲುಲು ನಿರ್ದೇಶಿಸಿದ್ದು ಫೆಬ್ರವರಿ 14ರಂದು ತೆರೆಕಾಣುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top