fbpx
ಸಮಾಚಾರ

ಈ ಫೋಟೋದಲ್ಲಿರುವ ಮಹಿಳಾ ಸೇನಾಧಿಕಾರಿ – ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ರವರ ಮಗಳೇ?

ರಕ್ಷಣಾ ಸಚಿವೆ ನಿರ್ಮಲ ಸೀತಾರಾಮನ್ ರವರೊಂದಿಗೆ ಮಹಿಳಾ ಸೇನಾಧಿಕಾರಿಯೊಬ್ಬರು ನಿಂತಿರುವ ಫೋಟೋ ಒಂದು  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಜೊತೆ ನಿಂತಿರುವ ಈ ಮಹಿಳೆ ಯಾರು ಅನ್ನೋ ಪ್ರಶ್ನೆ ಹಲವರಲ್ಲಿ ಉದ್ಭವಿಸಿದ್ದು! ಕೆಲವರಂತೂ ಆಕೆ ಬೇರೆ ಯಾರು ಅಲ್ಲಾ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಮಗಳೆಂದು ಸುದ್ದಿ ಹಬ್ಬಿಸಿದ್ದಾರೆ.

ಇನ್ನೂ ರಕ್ಷಣಾ ಸಚಿವೆಯೊಂದಿಗೆ ಮಹಿಳಾ ಸೇನಾಧಿಕಾರಿಯೊಬ್ಬರು ನಿಂತಿರುವ ಫೋಟೋ ಒಂದನ್ನು ‘ಟೀಮ್‌ ಮೋದಿ ಸಪೋರ್ಟರ್‌ ಜಲೂರ್‌’ ಫೇಸ್‌ಬುಕ್‌ ಪೇಜ್‌ ಮೊದಲಿಗೆ ಪೋಸ್ಟ್ ಮಾಡಿದ್ದು ಆ ನಂತರ ‘ಐ ಸಪೋರ್ಟ್‌ ಆರ್‌ಎಸ್‌ಎಸ್‌’ ಫೇಸ್‌ಬುಕ್‌ ಪೇಜ್‌ ಕೂಡ ಈ ಫೋಟೋವನ್ನು ಶೇರ್ ಮಾಡಿದೆ. ಭಾರಿ ಲೈಕ್ ಮತ್ತು ಶೇರ್ ಗಿಟ್ಟಿಸುತ್ತಿರುವ ಈ ಫೋಟೋ ವೈರಲ್ ಆಗಿದ್ದು ಜನರು ನಿಜವಾಗಿಯೂ ಈ ಸೇನಾಧಿಕಾರಿ ರಕ್ಷಣಾ ಸಚಿವೆ ನಿರ್ಮಲ ಸೀತಾರಾಮನ್ ಅವರ ಮಗಳಾ? ಎಂದು ಹುಡುಕಾಟ ಶುರು ಮಾಡಿದ್ದಾರೆ.

 

 

ಜನರ ಈ ಹುಡುಕಾಟಕ್ಕೆ ಉತ್ತರ ಸಿಕ್ಕಿದ್ದು, ಈ ಬಗ್ಗೆ ಭಾರತೀಯ ಸೇನೆ ವಕ್ತಾರ ರೋಹನ್‌ ಆನಂದ್‌ ಸ್ಪಷ್ಟತೆ ನೀಡಿದ್ದಾರೆ ಎನ್ನಲಾಗಿದೆ . ಈ ಮೂಲಕ ರಕ್ಷಣಾ ಸಚಿವೆ ನಿರ್ಮಲ ಸೀತಾರಾಮನ್ ರವರೊಂದಿಗೆ ಫೋಟೋದಲ್ಲಿ ನಿಂತಿರುವ ಮಹಿಳಾ ಸೇನಾಧಿಕಾರಿ ಅವರ ಮಗಳಲ್ಲ, ಆಕೆ ಇತ್ತೀಚೆಗೆ ಸೇನೆಗೆ ನೇಮಕವಾದ ಅಧಿಕಾರಿ ಎಡನು ತಿಳಿದು ಬಂದಿದೆ.

ಹಾಗಾದರೆ ‘ಈ ಫೋಟೋದಲ್ಲಿರುವವರು ಯಾರು?’ ಎಂದು ಹುಡುಕಿದಾಗ ಈಕೆ ಮಂಗಳೂರು ಮೂಲದ ನಿಖಿತಾ ವೀರಯ್ಯ ಎಂಬ ಯುವತಿ ಎಂದು ತಿಳಿದು ಬಂದಿದ್ದು , ಎರಡು ವರ್ಷದ ಹಿಂದೆ ಈಕೆ ಸೇನಾಪಡೆಗೆ ಸೇರಿದ್ದಾರೆಂಬ ವಿಚಾರ ಬೆಳಕಿಗೆ ಬಂದಿದೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top