fbpx
ಸಮಾಚಾರ

ಮೇಕೆದಾಟು ಯೋಜನೆಯಿಂದ ಡಾ.ರಾಜ್‌ ಕುಟುಂಬಕ್ಕೆ ಎದುರಾಗಲಿದೆಯೇ ಸಂಕಷ್ಟ ? ಈ ಬಗ್ಗೆ ಶಿವಣ್ಣ ಹೇಳಿದ್ದೇನು ಗೊತ್ತಾ?

ಮೇಕೆದಾಟು ಯೋಜನೆಗೆ ಡಿಪಿಆರ್​ಗೆ ಕೇಂದ್ರ ಜಲಸಂಪನ್ಮೂಲ ಇಲಾಖೆ ಗ್ರೀನ್ ಸಿಗ್ನಲ್ ನೀಡಿದ್ದು ಇದರಿಂದ ಕೊಂಚ ಕರುನಾಡು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ಆದರೆ ಮೇಕೆದಾಟು ಯೋಜನೆಗೆ ಅಸ್ತು ಎಂದಿರುವ ಡಿಪಿಆರ್​ಗೆ ಕೇಂದ್ರ ಜಲಸಂಪನ್ಮೂಲ ಇಲಾಖೆ ವಿರುದ್ಧ ತಮಿಳನಾಡು ಅಸಮಾಧಾನ ವ್ಯಕ್ತಪಡಿಸಿದ್ದು ಮತ್ತೆ ಕ್ಯಾತೆ ತೆಗೆದಿದೆ.

ಆದರೆ ವಿಷಯ ಏನೆಂದರೆ ಮೇಕೆದಾಟು ಯೋಜನೆಯಿಂದ ಡಾ.ರಾಜ್‌ ಕುಟುಂಬಕ್ಕೆ ಒಂದು ರೀತಿಯ ಸಂಕಷ್ಟ ಎದುರಾಗಲಿದೆ. ಹೌದು, ಅಸಲಿಗೆ ಆ ಸಂಕಷ್ಟ ಏನೆಂದರೆ? ಒಂದು ವೇಳೆ ಮೇಕೆದಾಟು ಯೋಜನೆ ಕಾರ್ಯಗತವಾದರೆ ‘ಮುತ್ತತ್ತಿ ದೇವಸ್ಥಾನ’ ಮುಳುಗಿ ಹೋಗುವ ಸಂಭವವಿದೆ. ಇದೇನು ಮುತ್ತತ್ತಿ ದೇವಸ್ಥಾನಕ್ಕೂ ಮತ್ತು ಡಾ.ರಾಜ್ ಕುಟುಂಬಕ್ಕೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ ? ಹೌದು! ಡಾ.ರಾಜ್ ಕುಟುಂಬಕ್ಕೂ ಮತ್ತು ಮುತ್ತತ್ತಿ ದೇವ ಸ್ಥಾನಕ್ಕೂ ಒಂದು ಅವಿನಾಭಾವ ಸಂಬಂಧವಿದೆ. ಅದು ಏನು ಎತ್ತ ಎಂದು ತಿಳಿಯಬೇಕಾದರೆ ಮುಂದೆ ಓದಿ…

ಮುತ್ತತ್ತಿ ದೇವಸ್ಥಾನದ ಮುತ್ತತ್ತಿರಾಯ ಅಂದರೆ ಆಂಜನೇಯ ಸ್ವಾಮಿಗೆ ಡಾ.ರಾಜಕುಮಾರ್ ತಂದೆ ಪುಟ್ಟಸ್ವಾಮಿ ಹಾಗೂ ತಾಯಿ ಲಕ್ಷ್ಮಮ್ಮ ಹರಕೆ ಹೊತ್ತ ನಂತರವೇ ಡಾ.ರಾಜಕುಮಾರ್ ಜನಿಸಿದ್ದಂತೆ. ಹಾಗಾಗಿ ಈ ದೇವಸ್ಥಾನದ ಕಂಡರೆ ರಾಜಣ್ಣನಿಗೆ ಎಲ್ಲಿಲ್ಲದ ಪ್ರೀತಿ. ರಾಜಣ್ಣ ಒಮ್ಮೆ ಈ ಮುತ್ತತ್ತಿ ರಾಯನ ಬಳಿ ಬಂದು ಕೃತಜ್ಞತೆ ಸಲ್ಲಿಸಿ ದೇವಸ್ಥಾನವನ್ನು ಕಟ್ಟಿಸಿಕೊಟ್ಟಿದ್ದರಂತೆ. ಆದ್ದರಿಂದ ಇದೀಗ ಮೇಕೆ ದಾಟು ಯೋಜನೆ ಕಾರ್ಯಗತವಾದರೆ ಈ ದೇವಸ್ಥಾನಕ್ಕೆ ತೊಂದರೆ ಆಗುವುದಂತೂ ಖಚಿತ ಎನ್ನಲಾಗುತ್ತಿದೆ ಹೀಗಾಗಿ ಈ ವಿಷಯದ ಕುರಿತಾಗಿ ರಾಜ್ ಕುಟುಂಬ ಕೊಂಚ ಆತಂಕಕ್ಕೆ ಒಳಗಾಗಿದೆ ಎಂದರೆ ತಪ್ಪಾಗಲಾರದು.

ಅಷ್ಟೇ ಅಲ್ಲದೆ ಈ ಮುತ್ತತ್ತಿರಾಯನನ್ನು ನಂಬಿಕೊಂಡು ಮುತ್ತತ್ತಿ ಹಳ್ಳಿಯ ಗ್ರಾಮಸ್ಥರು ಇದ್ದು . ದಿನನಿತ್ಯ ಈ ದೇವಾಲಯಕ್ಕೆ ಭೇಟಿ ನೀಡುವ ನೂರಾರು ಯಾತ್ರಿಕರಿಂದ ಅವರು ದಿನ ದೂಡುತ್ತಿದ್ದಾರೆ ಹಾಗಾಗಿ ಈಗ ಒಂದುವೇಳೆ ಈ ದೇವಸ್ಥಾನ ಮುಳುಗಡೆಯಾದರೆ ಗ್ರಾಮಸ್ಥರಿಗೆ ಅದು ಬಹುದೊಡ್ಡ ಆಘಾತವಾಗುತ್ತದೆ. ಹೀಗಾಗಿ ಡಾ.ರಾಜಕುಮಾರ್ ಕುಟುಂಬಕ್ಕೂ ಮತ್ತು ಮುತ್ತತ್ತಿ ಗ್ರಾಮಸ್ಥರಿಗೂ ಭಾವನಾತ್ಮಕ ಬೀಡಾಗಿರುವ ಈ ದೇವಸ್ಥಾನದ ಅಳಿವು ಉಳಿವಿನ ಬಗ್ಗೆ ಸರ್ಕಾರ ಸೂಕ್ತ ನಿರ್ಣಯವನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಮುತ್ತತ್ತಿ ದೇವಸ್ಥಾನದ ಮುಳುಗಡೆಯ ಬಗ್ಗೆ ಶಿವಣ್ಣ ಹೇಳಿದ್ದೇನು ?

ಒಟ್ಟಿನಲ್ಲಿ ಈ ವಿಚಾರದ ಬಗ್ಗೆ ಶಿವಣ್ಣ ದನಿ ಎತ್ತಿದ್ದು. ದೇವಸ್ಥಾನ ಉಳಿಸಿಕೊಡಿ ಅಂತ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ ಹಾಗೂ ದೇವಸ್ಥಾನ ಉಳಿಸಿಕೊಳ್ಳಲು ಸಾಧ್ಯವಾದಷ್ಟು ಪ್ರಯತ್ನ ಪಡುತ್ತೇವೆ ಅಂತಾ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top