fbpx
ಸಮಾಚಾರ

ಕನ್ನಡಿಗ ಕೆಎಲ್ ರಾಹುಲ್‍ಗೆ ಅದೃಷ್ಟ ತಂದ ರೋಹಿತ್ ಶರ್ಮ ಮಗಳು.

ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಅಂತಿಮ ಮತ್ತು ನಿರ್ಣಾಯಕ ಟೆಸ್ಟ್ ಪಂದ್ಯಕ್ಕಾಗಿ ಟೀಮ್ ಇಂಡಿಯಾದ 13ರ ಸದಸ್ಯರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಸದ್ಯ ಕಳಪೆ ಫಾರ್ಮ್‌ನಿಂದಾಗಿ ಟೀಕೆಗೆ ಗುರಿಯಾಗಿ ಮೆಲ್ಬೋರ್ನ್ ಟೆಸ್ಟ್ ಮಿಸ್ ಮಾಡಿಕೊಂಡಿದ್ದ ಕನ್ನಡಿಗ ಕೆಎಲ್ ರಾಹುಲ್ ತಂಡವನ್ನು ಸೇರಿಕೊಂಡಿದ್ದಾರೆ.

ರೋಹಿತ್ ಶರ್ಮಾ ತಮ್ಮ ಪತ್ನಿ ಮತ್ತು ಮಗಳೊಂದಿಗೆ ಇರಲು ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಿಂದ ಹೊರಗುಳಿದು ತವರಿಗೆ ಮರಳಿದ್ದಾರೆ. ಹೀಗಾಗಿ ತಂಡದಲ್ಲಿ ಒಬ್ಬ ಬ್ಯಾಟ್ಸ್ ಮನ್ ಸ್ಥಾನ ಬಾಕಿಯಿದ್ದು, ಆ ಸ್ಥಾನ ಇದೀಗ ಕೆಎಲ್ ರಾಹುಲ್ ಪಾಲಾಗಿದೆ ಎಂದು ಹೇಳಲಾಗಿದ್ದು ಈ ಮೂಲಕ ಕಳಪೆ ಫಾರ್ಮ್ ನಿಂದ ಹೊರಬರಲು ರಾಹುಲ್ ಗೆ ಮತ್ತೊಂದು ಅವಕಾಶ ಸಿಕ್ಕಿದೆ ಎಂದೇ ಹೇಳಲಾಗುತ್ತಿದೆ.. ರೋಹಿತ್ ಶರ್ಮಾ ಮಗಳ ದೆಸೆಯಿಂದ ರಾಹುಲ್ ಗೆ ಇನ್ನೊಮ್ಮೆ ತಂಡದಲ್ಲಿ ಸ್ಥಾನ ಸಿಗುವ ಅದೃಷ್ಟ ಒಲಿದಿದೆ.

 

 

ಟೀಂ ಇಂಡಿಯಾ ನಾಯಕ ನಾಯಕ ವಿರಾಟ್ ಕೊಹ್ಲಿ ಅಂತಿಮ ಟೆಸ್ಟ್ ಪಂದ್ಯಕ್ಕೆ ಯಾವುದೇ ಬದಲಾವಣೆ ಮಾಡದೇ ಕಣಕ್ಕೆ ಇಳಿಯುವ ನಿರ್ಧಾರ ಕೈಗೊಂಡಿದ್ದರು. ಆದರೆ ರೋಹಿತ್ ಶರ್ಮಾ ಗೈರು ಹಾಜರಿಯಿಂದ ಅನಿವಾರ್ಯವಾಗಿ ಬದಲಾವಣೆ ಮಾಡಬೇಕಿದೆ. ರೋಹಿತ್ ತಮ್ಮ ಮಗುವನ್ನು ನೋಡಲು ಮುಂಬೈಗೆ ತೆರಳಿದ್ದಾರೆ. ಹೀಗಾಗಿ ಅವರಿಂದ ತೆರವಾದ ಸ್ಥಾನಕ್ಕೆ ಕೆಎಲ್ ರಾಹುಲ್ ರನ್ನು ಆಯ್ಕೆ ಮಾಡಲಾಗಿದೆ. ಹೀಗಾಗಿ ಇದು ರಾಹುಲ್ ಗೆ ಕೊನೆಯ ಛಾನ್ಸ್ ಆಗಿದ್ದು, ಇಲ್ಲಿಯೂ ರಾಹುಲ್ ವಿಫಲರಾಜದರೆ ತಂಡದಿಂದ ಗೇಟ್ ಪಾಸ್ ಖಂಡಿತಾ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top