fbpx
ಸಮಾಚಾರ

ತಾನು ಪಾಠ ಮಾಡುತ್ತಿದ್ದ ಕಾಲೇಜಿನ ವಿದ್ಯಾರ್ಥಿಯನ್ನೇ ಮದುವೆಯಾಗಿ ಪೀಠತ್ಯಾಗ ಮಾಡಿದ ಸ್ವಾಮೀಜಿ!

ಕೊಪ್ಪಳ ಜಿಲ್ಲೆಯ ಅಳವಂಡಿ ಗ್ರಾಮದ ಶ್ರೀ ಸಿದ್ದೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿಗಳು ಪೀಠತ್ಯಾಗ ಮಾಡಿರುವ ವಿಚಾರ ಇದೀಗ ಬೆಳಕಿಗೆ ಬಂದಿದ್ದು. ಸ್ವಾಮೀಜಿ ಏಕೆ ಪೀಠ ತ್ಯಾಗ ಮಾಡಿದರೂ ಅನ್ನುವ ಬಿಸಿ-ಬಿಸಿ ಚರ್ಚೆ ಎಲ್ಲೆಡೆ ನಡೆಯುತ್ತಿದೆ.

ಉಜ್ಜಯನಿಯ ಶಾಖಾ ಪೀಠದಲ್ಲೊಂದಾ ಈ ಮಠವೂ ಒಳ್ಳೆಯ ಹೆಸರನ್ನು ಸಂಪಾದಿಸಿದ್ದು ಇದೀಗ ದಿಢೀರನೆ ಕಾಡ್ಗಿಚ್ಚಿನಂತೆ ಹರಡಿರುವ ಈ ಸುದ್ದಿ ಯಿಂದ ಮಠದ ನೆಮ್ಮದಿಗೆ ಅಡ್ಡಿಯಾಗಿದ್ದು
ಶ್ರೀ ಸಿದ್ದೇಶ್ವರ ಮಠದ ಸ್ವಾಮೀಜಿಗಳು ಪೀಠತ್ಯಾಗ ಮಾಡಿರುವುದರ ಬಗ್ಗೆ ಹಲವು ಅನುಮಾನಗಳೂ ವ್ಯಕ್ತವಾಗುತ್ತಿದೆ.

ಅಷ್ಟಕ್ಕೂ ಕೊಪ್ಪಳ ಜಿಲ್ಲೆಯ ಅಳವಂಡಿ ಗ್ರಾಮದ ಶ್ರೀ ಸಿದ್ದೇಶ್ವರ ಮಠದ ಸ್ವಾಮೀಜಿಗಳು ಪೀಠತ್ಯಾಗ ಮಾಡಿದ್ದೂ ಏಕೆ ?

ತಮ್ಮ 13ನೇ ವಯಸ್ಸಿನಲ್ಲಿಯೇ ಪೀಠಾಧಿಪತಿಯಾಗಿದ್ದ ಸ್ವಾಮೀಜಿಯವರು ಮುಂಡರಗಿಯ ಕಾಲೇಜಿನಲ್ಲಿ ಪಾಠವನ್ನೂ ಮಾಡುತ್ತಿದ್ದರು.ಗುರುಗಳಾಗಿ ಪಾಠ ಮಾಡುತ್ತಿದ್ದ ಸ್ವಾಮೀಜಿಗಳು ಇದೀಗ ಕಾಲೇಜಿಗೆ ಬರುತ್ತಿದ್ದ ತಮ್ಮ ವಿದ್ಯಾರ್ಥಿನಿಯನ್ನೇ ಪ್ರೀತಿಸಿ ಮದುವೆಯಾಗಿದ್ದಾರೆ ಅನ್ನೋ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದ್ದು, ಇದು ಮಠವನ್ನು ಅನುಸರಿಸುತ್ತ ಬಂದಿರುವ ಭಕ್ತಾದಿಗಳಗಂತೂ ದೊಡ್ಡ ಆಘಾತವನ್ನುಂಟು ಮಾಡಿದೆ.

ಈ ವಿಷಯವಾಗಿ ಸ್ವಾಮೀಜಿಗಳ ತಂದೆಯನ್ನು ವಿಚಾರಿಸಿದರೆ “ನನಗೇನು ಗೊತ್ತಿಲ್ಲ. ನಾನು ಮನನೊಂದು ಮಠಕ್ಕೆ ಹೋಗಿಲ್ಲ. ಸ್ವಾಮೀಜಿಗಳು ಮಠ ಬಿಟ್ಟು ಹೋಗಿ ಎರಡು ದಿನಗಳು ಕಳೆದು ಹೋಗಿದ್ದು, ಹೋಗುವಾಗ ಮಾತ್ರ ನನ್ನ ಬಳಿ ಮೊಬೈಲ್ ನೀಡಿ ಮನನೊಂದು ಹೋಗುತ್ತಿದ್ದೇನೆ” ಎಂದು ಹೇಳಿದರು ಅಷ್ಟೇ ಎನ್ನುತ್ತಾರೆ ಸ್ವಾಮೀಜಿಗಳ ತಂದೆ.

ಒಟ್ಟಿನಲ್ಲಿ ಸ್ವಾಮೀಜಿ ಪೀಠ ತ್ಯಾಗ ಮಾಡಿ ಹೋಗಿರುವ ವಿಚಾರ ಎಲ್ಲೆಡೆ ಜನಜನಿತವಾಗಿದ್ದು , ಕೆಲವರು ಸ್ವಾಮೀಜಿ ಮದುವೆಯಾಗಿದ್ದಕ್ಕೆ ಮಠ ಬಿಟ್ಟು ಹೋದರು ಎಂದರೆ ಇನ್ನು ಕೆಲವರು ಸ್ವಾಮೀಜಿಗೆ ಮಠವನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗಲಿಲ್ಲ ಹಾಗಾಗಿ ಆವರೇ ಮನನೊಂದು ಪೀಠ ತ್ಯಾಗ ಮಾಡಿದ್ದರೆಂದು ಮಾತನಾಡಿಕೊಳ್ಳುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top