fbpx
ಸಮಾಚಾರ

ಲೋಕ ಸಭಾ ಚುನಾವಣೆ ಹತ್ತಿರವಾಗುತ್ತಿದಂತೆಯೇ “ಕಿಚಡಿ ಪ್ಲಾನ್ ” ಮಾಡಿದ ಮೋದಿ ಸರ್ಕಾರ! ಏನಿದು ಕಿಚಡಿ ಪ್ಲಾನ್ ಗೊತ್ತಾ ?

ಲೋಕ ಸಭಾ ಚುನಾವಣೆ ಇನ್ನೇನು ಹತ್ತಿರವಾಗುತ್ತಿದ್ದು, ಈ ಚುನಾವಣೆಯಲ್ಲಿ ತಮ್ಮ- ತಮ್ಮ ಪಕ್ಷದ ಗೆಲುವಿನ ಬಾವುಟವನ್ನು ಹಾರಿಸಲೂ ಪ್ರತಿ ಪಕ್ಷವೂ ಆವಣಿಸುತ್ತಿದ್ದು ಅದಕ್ಕೆ ತಕ್ಕ ಹಾಗೇ ಸಿದ್ಧತೆಗಳನ್ನು ಸಹ ಮಾಡಿಕೊಳ್ಳುತ್ತಿದೆ.

ಪಂಚ ರಾಜ್ಯ ಚುನಾವಣೆಯಿಂದ ಎಚ್ಚೆತ್ತು ಕೊಂಡಿರುವ ಬಿಜೆಪಿ ಮುಂದೆ ಇನ್ಯಾವ ರಾಜ್ಯದಲ್ಲೂ ಸೋಲಿನ ಕಹಿ ಅನುಭವಿಸದಂತೆ ನಿಗಾ ವಹಿಸಿದೆಯಂತೆ. ಹಾಗೂ ಇನ್ನೇನು ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಫುಲ್ ಅಲರ್ಟ್ ಆಗಿರುವ ಬಿಜೆಪಿ ಲೋಕ ಸಭಾ ಚುನಾವಣೆಯಲ್ಲಿ ‘ದಲಿತರ ಮತ ‘ ಸೆಳೆಯಲು, ಬಿಜೆಪಿ ‘ಕಿಚಡಿ ಐಡಿಯಾ‘ ಮಾಡಿದೆ.

ಏನಿದು ಕಿಚಡಿ ಪ್ಲಾನ್ :

ಲೋಕ ಸಭಾ ಚುನಾವಣೆಯಲ್ಲಿ ದಲಿತರ ಮತವನ್ನು ತನ್ನತ್ತ ಸೆಳೆಯುವತ್ತ ಚಿಂತನೆ ನಡೆಸಿರುವ ಬಿಜೆಪಿ ‘ಕಿಚಡಿ ಐಡಿಯಾ’ ಮಾಡಿದೆ . ಹೌದು,ಜನವರಿ 6 ರಂದು ದೆಹಲಿಯಲ್ಲಿ ಸುಮಾರು 3 ಲಕ್ಷ ದಲಿತರು ಭಾಗಿಯಾಗುವ
ಮಹಾ ರಾಲಿ ಯನ್ನು ಬಿಜೆಪಿ ಆಯೋಜಿಸಿದ್ದು ಅಲ್ಲಿ ದಲಿತರ ಮನೆಯಿಂದ ಅಕ್ಕಿ, ಬೇಳೆ ತಂದು 3 ಸಾವಿರ ಕೆಜಿ ಕಿಚಡಿ ತಯಾರಿಸಲಾಗುತ್ತದಂತೆ. ಒಟ್ಟಿನಲ್ಲಿ ದಲಿತರ ಮತ ಸೆಳೆಯಲು ಒಳ್ಳೆಯ ಉಪಾಯವನ್ನೇ ಹೆಣೆದಿರುವ ಬಿಜಿಪಿ ಮುಂದೆ ಚುನಾವಣೆಯಲ್ಲಿ ಯಾವ ಮಟ್ಟಿಗೆ ಗೆಲುವನ್ನು ಸಾಧಿಸುತ್ತದೋ ಕಾದು ನೋಡಬೇಕಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top