fbpx
ಸಮಾಚಾರ

ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿದ ‘ಈ ಕೆಲಸಕ್ಕೆ ‘ ಜನರಿಂದ ಹರಿದು ಬಂದಿತು ಮೆಚ್ಚುಗೆಯ ನುಡಿಗಳು !

ರಾಜಕಾರಣಿಗಳೆಂದರೆ ಸಾಕು ಫುಲ್ ಟೈಟ್ ಸೆಕ್ಯೂರಿಟಿ ಹಾಗೂ ಝೀರೋ ಟ್ರಾಫಿಕ್ ನಲ್ಲೆ ಓಡಾಟ ನಡೆಸುತ್ತಾರೆ ಎಂಬುದು ಸಾಮಾನ್ಯವಾಗಿ ಎಲ್ಲರಿಗು ಗೊತ್ತಿರುವ ವಿಚಾರವೇ ಆದರೆ ಈ ಮೇಲೆ ಹೇಳಿದ ಸೆಕ್ಯೂರಿಟಿ ಹಾಗೂ ಝೀರೋ ಟ್ರಾಫಿಕ್ ಎರಡು ಸೌಲಭ್ಯವನ್ನು ದಿಕ್ಕರಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ರವರು ಇದೀಗ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಹೌದು, ನಿನ್ನೆ ಹೊಸ ವರ್ಷದ ಸಾಲು-ಸಾಲು ರಜೆ ಮುಗಿಸಿ ಬೆಂಗಳೂರು ನಗರದತ್ತ ಜನರು ಬರುತ್ತಿರುವ ಹಿನ್ನೆಲೆಯಲ್ಲಿ ತುಮಕೂರು ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಏರ್ಪಟಿತ್ತು. ಭಾರೀ ಸಂಖ್ಯೆಯಲ್ಲಿ ವಾಹನಗಳು ರಸ್ತೆಗೆ ಇಳಿದ ಪರಿಣಾಮ ನೆಲಮಂಗಲದ ನವಯುಗ ಟೋಲ್ ಬಳಿ ಹೆಚ್ಚು ಟ್ರಾಫಿಕ್ ಉಂಟಾಯಿತು . ವಿಶೇಷ ಎಂದರೆ ಇದೆ ದಾರಿಯಲ್ಲಿ ಅಂದರೆ ತುಮಕೂರಿನ ಕುಣಿಗಲ್‍ನಿಂದ ಬೆಂಗಳೂರು ಕಡೆಗೆ ಮಾಜಿ ಸಿಎಂ ಸಿದ್ದರಾಮಯ್ಯನವರು ಹೊರಟಿದ್ದರೂ. ಟ್ರಾಫಿಕ್ ಜಾಮ್ ಆಗುವ ಮಾರ್ಗದಲ್ಲೇ ಬರುತ್ತಿದ್ದೇನೆ ಎಂದು ಸಿದ್ದರಾಮಯ್ಯನವರು ತಿಳಿದ್ದಿದ್ದರೂ ಅವರು ಯಾವುದೇ ಝೀರೋ ಟ್ರಾಫಿಕ್ ಸೌಲಭ್ಯ ಬಳಸದೆ ಜನ ಸಾಮಾನ್ಯರಂತೆ ಟ್ರಾಫಿಕ್ ಜಾಮ್ ನಲ್ಲಿ ಪರದಾಡಿದ ರೀತಿಗೆ ಜನರು ಮೆಚ್ಚುಗೆ ಸೂಚಿಸಿದರು.

ಒಟ್ಟಿನಲ್ಲಿ ಸಿದ್ದರಾಮಯ್ಯನವರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top