fbpx
ಸಮಾಚಾರ

ಹಿಂದಿಯಲ್ಲಿ 30 ಕೋಟಿ ದಾಟಿದ ಕೆಜಿಎಫ್ ಕಲೆಕ್ಷನ್.

ಎಲ್ಲೆಲ್ಲೂ ಕೆಜಿಎಫ್ ಸಿನಿಮಾದ್ದೇ ಕ್ರೇಜ್. ಅಕ್ಷರಶಃ ಕೆಜಿಎಫ್ ಸಿನಿಮಾದ ಭರಾಟೆಗೆ ಸಿನಿ ಪ್ರೇಕ್ಷಕರು ಫಿದಾ ಆಗಿದ್ದಾರೆ . ಸಿನಿಮಾದಲ್ಲಿ ಪ್ರಶಾಂತ್ ನೀಲ್ ರವರ ಸೂಪರ್ ನಿರ್ದೇಶನಕ್ಕೆ, ರಾಕಿಂಗ್ ಸ್ಟಾರ್ ಯಶ್ ರವರ ಅಮೇಜಿಂಗ್ ಆಕ್ಟಿಂಗ್ ಗೆ, ಭುವನ್ ಗೌಡ ರವರ ವಂಡರ್ಫುಲ್ ಕ್ಯಾಮೆರಾ ವರ್ಕ್ ಗೆ ಮತ್ತು ರವಿ ಬಸರೂರು ರವರ ಮ್ಯೂಸಿಕ್ ಗೆ ಸಿನಿ ಪ್ರೇಮಿಗಳು ಮಾರು ಹೋಗಿದ್ದಾರೆ.

ಬಾಕ್ಸ್ ಆಫೀಸ್ ನಲ್ಲಿ ಕೆಜಿಎಫ್ ಸಿನಿಮಾ ಹೊಸ ದಾಖಲೆಯನ್ನು ಸೃಷ್ಟಿಸಿದೆ , ಹೌದು! ಬಿಡುಗಡೆಯಾದ ಐದು ಭಾಷೆಗಳಲ್ಲೂ ₹ 150 ಕೋಟಿ ಕಲೆಕ್ಷನ್​ ಮೀರಿ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಐದು ಭಾಷೆಗಳಿಂದಲೂ ಭರ್ಜರಿ ಕಲೆಕ್ಷನ್ ಗಳಿಸುತ್ತಿದೆ. ಇದೀಗ ಬರೀ ಹಿಂದಿ ಅವತರಣಿಕೆ ಒಂದರಲ್ಲೇ ಕೆಜಿಎಫ್​ ₹ 30 ಕೋಟಿ ಬಾಚಿಕೊಂಡಿದೆ.

ಒಟ್ಟಾರೆ ಇದುವರೆಗೂ ಹಿಂದಿ ಕೆಜಿಎಫ್ ಕಲೆಕ್ಷನ್ ₹ 30.45 ಕೋಟಿ ರೂಪಾಯಿ. ಈ ಕುರಿತು ಬಾಲಿವುಡ್‌ನ ಖ್ಯಾತ ವಿಮರ್ಶಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಹಿಂದಿಯಲ್ಲಿ ಡಬ್ ಆದ ಚಿತ್ರಗಳ ಪೈಕಿ ಕೆಜಿಎಫ್ ನಾಲ್ಕನೇ ಸ್ಥಾನದಲ್ಲಿದೆ. ಈ ಹಿಂದೆ ರಜನಿಕಾಂತ್ ಅಭಿನಯದ ಕಬಾಲಿ ಚಿತ್ರದ ಹಿಂದಿ ಅವತರಣಿಕೆ 24 ಕೋಟಿ ಕಲೆಕ್ಷನ್ ಮಾಡಿತ್ತು. ಅದಕ್ಕೂ ಮುಂಚೆ ತೆರೆಕಂಡಿದ್ದ ಎಂಥಿರನ್ 22 ಕೋಟಿ ಬಾಚಿತ್ತು. ಇದೀಗ, ಈ ಎರಡು ಚಿತ್ರಗಳ ಕಲೆಕ್ಷನ್ ದಾಖಲೆಯನ್ನ ಕೆಜಿಎಫ್ ಸಿನಿಮಾ ಅಳಿಸಿಹಾಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top