fbpx
ಸಮಾಚಾರ

ಸಿಎಂ ಕುಮಾರಸ್ವಾಮಿ ರವರ ಮೇಲೆ ಕಿಡಿಕಾರಿದ ಯಡಿಯೂರಪ್ಪ – ಅಷ್ಟಕ್ಕೂ ಆರೋಪ ಏನು ಗೊತ್ತಾ?

ಬೆಂಗಳೂರಿನ ಮಲ್ಲೇಶ್ವರಂ ನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಯುತ ಯಡಿಯೂರಪ್ಪನವರು ಸಿಎಂ ಕುಮಾರಸ್ವಾಮಿ ರವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹೌದು, ಸಿಎಂ ಕುಮಾರ್ ಸ್ವಾಮಿಯವರ ಈ ನಡೆಯ ಬಗ್ಗೆ ಯಡಿಯೂರಪ್ಪನವರು ಹರಿಹಾಯ್ದಿದ್ದಾರೆ.

ಅಂದಹಾಗೆ ಸಿಎಂ ಕುಮಾರ್ ಸ್ವಾಮಿಯವರ ಮೇಲೆ ಯಡಿಯೂರಪ್ಪನವರು ವಾಗ್ದಾಳಿ ನಡೆಸುವುದರ ಹಿಂದೆ ಒಂದು ಕಾರಣವಿದೆ. ಹೌದು, ಯಡಿಯೂರಪ್ಪನವರು ರೈತರ ಹಿತಕಾಯಬೇಕಾದ ಸಿಎಂ ಕುಮಾರಸ್ವಾಮಿಯವರು, ಮಗನ ಸಿನಿಮಾ ಶೂಟಿಂಗ್ ವೀಕ್ಷಿಸಲು ಫ್ಯಾಮಿಲಿ ಜೊತೆ ಫ್ರಾನ್ಸ್​ಗೆ ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.

ಆದರೆ ಈ ಹಿಂದೆ ಸಿಎಂ ಕುಮಾರಸ್ವಾಮಿಯವರು ಸಿಂಗಾಪುರದಲ್ಲಿ ಹೊಸ ವರ್ಷಾಚರಣೆ ಹೋಗಿದ್ದಾರೆ ಎನ್ನಲಾಗುತ್ತಿತ್ತು. ಇದೀಗ ಫ್ರಾನ್ಸ್​ನಲ್ಲಿ ಸಿಎಂ ಮಗನ ಸಿನಿಮಾ ಶೂಟಿಂಗ್ ಹಾಗೂ ಹೊಸ ವರ್ಷಾಚರಣೆಗೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಆಕ್ರೋಶಗೊಂಡ ಯಡಿಯೂರಪ್ಪನವರು ಸಿಎಂ ಕುಮಾರಸ್ವಾಮಿ ಅವರಿಗೆ ಜನರೇ ಪಾಠ ಕಲಿಸುತ್ತಾರೆ ಎಂದು ಕಿಡಿಕಾರಿದ್ದಾರೆ.

ಇತ್ತೀಚಿಗೆ ರಾಜಕೀಯದಲ್ಲಿ ರಾಜಕಾರಣಿಗಳ ವಾಗ್ದಾಳಿಗಳು ಸರ್ವೇ ಸಾಮಾನ್ಯವಾಗಿದ್ದು, ಒಬ್ಬರು ಇನ್ನೊಬ್ಬರನ್ನು ಖಂಡಿಸುವುದು ತೀರಾ ಸಹಜವಾಗಿ ಹೋಗಿದೆ. ಆದರೆ ವಿದೇಶದಿಂದ ಸಿಎಂ ಕುಮಾರಸ್ವಾಮಿ ಯವರು ಮರಳಿ ಬಂದ ಮೇಲೆ ಯಡಿಯೂರಪ್ಪನವರ ಈ ಆರೋಪಕ್ಕೆ ಏನು ಉತ್ತರ ನೀಡಲಿದ್ದಾರೋ ಕಾದು ನೋಡಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top