fbpx
ಮನೋರಂಜನೆ

ಎಲ್ಲಿ ನಿರ್ಮಾಣವಾಗುತ್ತೆ ವಿಷ್ಣು ಸ್ಮಾರಕ: ಅಳಿಯ ಅನಿರುದ್ಧ ಹೇಳಿದ್ದೇನು..?

ವಿಷ್ಣುವರ್ಧನ್​ ದೈಹಿಕವಾಗಿ ನಮ್ಮಿಂದ ದೂರವಾಗಿ 9 ವರ್ಷಗಳು ಕಳೆದರೂ ಸ್ಮಾರಕದ ಗೊಂದಲ ಇನ್ನೂ ಬಗೆಹರಿದಿಲ್ಲ ಎಂಬ ಕೊರಗು ವಿಷ್ಣು ಕುಟುಂಬಸ್ಥರು ಹಾಗೂ ಅಭಿಮಾನಿಗಳನ್ನು ಚಿಂತೆಯ ಮಡುವಿಗೆ ತಳ್ಳಿದೆ.. ಕಳೆದ ತಿಂಗಳು ಅಂಬರೀಷ್​ ಸಾವನ್ನಪ್ಪಿದಾಗಲೂ ಮತ್ತೆ ಈ ವಿಷಯ ಚರ್ಚೆಗೆ ಬಂದಿತ್ತು. ಆ ವೇಳೆ ವಿಷ್ಣು ಅಭಿಮಾನಿಗಳು ವಿಷ್ಣು ಸ್ಮಾರಕದ ಸಮಸ್ಯೆಯನ್ನು ಬಗೆಹರಿಸಲು ಡಿಸೆಂಬರ್​ 30ರವರೆಗೆ ಗಡುವು ನೀಡಿದ್ದರು. ಹೇಗಿದ್ದರೂ ಸರ್ಕಾರವಾಗಲಿ ಅಥವಾ ಚಿತ್ರರಂಗವಾಗಲಿ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ.

ಇದೀಗ ಸ್ಮಾರಕ ವಿಚಾರವಾಗಿ ಅಭಿಮಾನಿಗಳಿಗೊಂದು ಸಿಹಿ ಸುದ್ದಿ ಸಿಕ್ಕಿದೆ. ಮೈಸೂರಿನಲ್ಲಿಯೇ ಸ್ಮಾರಕ ನಿರ್ಮಾಣ ಮಾಡಲು ಸರ್ಕಾರ ಅನುಮತಿ ಕೊಟ್ಟಿದೆ ಎಂದು ಅನಿರುದ್ಧ್ ಸ್ಪಷ್ಟನೆ ಕೊಟ್ಟಿದ್ದಾರೆ. ಇನ್ನೇರಡು ತಿಂಗಳಲ್ಲಿ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಕಾರ್ಯ ಪ್ರಾರಂಭವಾಗುತ್ತದೆ. ಒಂಬತ್ತು ವರ್ಷಗಳಿಂದ ಸಾಕಷ್ಟು ನೋವು ಪಟ್ಟಿದ್ವಿ. ಈಗ ಅದೆಲ್ಲಕ್ಕೂ ಉತ್ತರ ಸಿಗುತ್ತಿದೆ ಎಂದು ವಿಷ್ಣು ಅಳಿಯ ಸ್ಪಷ್ಟನೆ ಕೊಟ್ಟಿದ್ದಾರೆ.

“ವಿಷ್ಣು ಸ್ಮಾರಕಕ್ಕಾಗಿ ಮೈಸೂರಿನಲ್ಲಿ ನಿಗದಿಪಡಿಸಲಾಗಿದ್ದ ಜಾಗದ ವಿವಾದ ಜನವರಿಯಲ್ಲಿ ಮುಗಿಯಲಿದೆ. ವಿವಾದ ಮುಗಿದ ತಕ್ಷಣವೇ ಸ್ಮಾರಕ ಕಾಮಗಾರಿ ಕೈಗೊಳ್ಳಲಾಗುವುದು ಅಂತ ಮೈಸೂರು ಜಿಲ್ಲಾಡಳಿತ ಹೇಳಿದೆ. ಮೈಸೂರಿನ ಹಲಾಲು ಗ್ರಾಮದ ಬಳಿ ವಿಷ್ಣುವರ್ಧನ್ ಸ್ಮಾರಕಕ್ಕಾಗಿ ಸರ್ಕಾರ ಜಾಗ ನೀಡಲಾಗಿತ್ತು ಆದರೆ . ಈ ಜಾಗದಲ್ಲಿ ಸ್ಮಾರಕ ನಿರ್ಮಾಣ ಆಗಬಾರದು ಅಂತ ಅಲ್ಲಿನ ರೈತರು ಹಠ ಹಿಡಿದಿದ್ದರು.. ಅವೆಲ್ಲ ಸಮಸ್ಯೆಗಳನ್ನ ಬಗೆಹರಿಸಿ ಕೂಡಲೇ ವಿಷ್ಣುಸ್ಮಾರಕ ನಿರ್ಮಾಣ ಮಾಡಲಾಗುವುದು” ಎಂದು ಅನಿರುದ್ ಹೇಳಿದ್ದಾರೆ.

“ಸ್ಮಾರಕ ನಿರ್ಮಾಣದ ಕುರಿತು ಮೈಸೂರಿನಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಡಿಸೆಂಬರ್‌ನಲ್ಲಿ ಕ್ರಿಸ್ಮಸ್ ರಜೆ ಇತ್ತು. ಅಲ್ಲದೇ ನ್ಯಾಯಾಧೀಶರ ಕೊರತೆ ಕೂಡ ಇದ್ದು, ಜಾಗಕ್ಕೆ ಸಂಬಂಧಿಸಿದ ವಿಚಾರಣೆ ತಡವಾಗುತ್ತಿದೆ. ಜನವರಿಯಲ್ಲಿ ಈ ವಿಷಯವನ್ನು ಸರಿಪಡಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಗಡುವು ವಿಧಿಸಿದ ಕೂಡಲೇ ಕಾಮಗಾರಿ ಆಗುವುದಿಲ್ಲ. ಇಷ್ಟೇ ದಿನ ಕಾದಿದ್ದೇವೆ. ಹಿರಿಯ ಅಧಿಕಾರಿಗಳ ಮಾತಿನ ಮೇಲೆ ಇನ್ನಷ್ಟು ದಿನ ಕಾಯುತ್ತೇವೆ. ಜನವರಿಯಲ್ಲೇ ಕಾಮಗಾರಿ ಪ್ರಾರಂಭಿಸುವ ಯತ್ನ ಮಾಡುತ್ತೇವೆ’ ಎಂದು ಅನಿರುಧ್ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top