fbpx
ಸಮಾಚಾರ

ಕನ್ನಡ ಚಿತ್ರರಂಗದಲ್ಲಿ 23 ವರ್ಷ ಪೂರೈಸಿದ ಕಿಚ್ಚ ಸುದೀಪ್.

ಕನ್ನಡ ಚಿತ್ರರಂಗದ ಈ ತಲೆಮಾರಿನ ನಾಯಕ ನಟರನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಮುಂಚೂಣಿಯ ನಟ ಅಂದ್ರೆ ಅದು ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್. ತಮ್ಮ ವಿಭಿನ್ನ ಕಂಠ, ಮ್ಯಾನರಿಸಂ ಮತ್ತು ಮನೋಜ್ಞ ನಟನೆಯಿಂದಲೇ ಸ್ಟಾರ್ ಅನ್ನಿಸಿಕೊಂಡಿರುವ ಸುದೀಪ್ ಅವರು ಚಿತ್ರರಂಗಕ್ಕೆ ಅಡಿಯಿಟ್ಟು ಬರೋಬ್ಬರಿ 23 ವರ್ಷಗಳು ಕಳೆದಿವೆ.ಕೇವಲ ಕರ್ನಾಟಕ ಮಾತ್ರವಲ್ಲದೆ ಬೇರೆ ರಾಜ್ಯ, ದೇಶಗಳಲ್ಲಿಯೂ ಭಾಷೆಗಳಲ್ಲಿಯೂ ಅಭಿಮಾನಿಗಳನ್ನು ಹೊಂದಿರೋ ಸುದೀಪ್ ಸಿನಿಮಾವನ್ನೇ ಧ್ಯಾನದಂತೆ ಹಚ್ಚಿಕೊಂಡ ವಿರಳ ವ್ಯಕ್ತಿತ್ವಗಳಲ್ಲಿ ಒಬ್ಬರು.. ತಮ್ಮ 23 ವರ್ಷದ ಜರ್ನಿಯನ್ನು ಕಿಚ್ಚ ಸುದೀಪ್ ಟ್ವಿಟರ್​​​ನಲ್ಲಿ ನೆನಪಿಸಿಕೊಂಡಿದ್ದಾರೆ.

 

 

“ನನ್ನ ಸಿನಿ ಜೀವನದಲ್ಲಿ ಬೆಳೆಯಲು ಪ್ರೋತ್ಸಾಹಿಸಿದ ಸ್ನೇಹಿತರು ಹಾಗೂ ಕುಟುಂಬವರ್ಗಕ್ಕೆ ನನ್ನ ಧನ್ಯವಾದ.. ಜನವರಿ 31ಕ್ಕೆ ನಾನು ಇಂಡಸ್ಟ್ರಿಗೆ ಬಂದು 23 ವರ್ಷವಾಗಲಿದ್ದು, ನಿಮ್ಮ ಪ್ರೋತ್ಸಾಹದಿಂದ ನನ್ನ ಪಯಣ ಇಲ್ಲಿವರೆಗೆ ತಲುಪಿದೆ” ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

ತೊಂಭತ್ತಾರನೇ ಇಸವಿಯಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಸುದೀಪ್ ಹಲವಾರು ಏಳು ಬೀಳುಗಳನ್ನು ಕಂಡಿದ್ದಾರೆ. ಅವಕಾಶಕ್ಕಾಗಿ ಅಲೆದಿದ್ದಾರೆ, ಅದನ್ನು ದಕ್ಕಿಸಿಕೊಳ್ಳಲು ತೀರಾ ಸಣ್ಣಪುಟ್ಟಪಾತ್ರಗಳನ್ನೂ ಮಾಡಿದ್ದಾರೆ. ಯಾಕೆಂದರೆ ಸಿನಿಮಾ ಎಂಬುದು ಸುದೀಪ್ ಬದುಕಿನ ಮಹಾ ಕನಸಾಗಿತ್ತು. ಒಬ್ಬ ನಟ ಅಭಿಮಮಾನದ ಪರಿಧಿಯಾಚೆಗೂ ಇಷ್ಟವಾಗುವಂಥಾ ಕೆಲ ಕ್ವಾಲಿಟಿಗಳಿವೆ. ಅಂಥವು ಕಿಚ್ಚಾ ಸುದೀಪ್ ವ್ಯಕ್ತಿತ್ವದಲ್ಲಿಯೂ ಧಾರಾಳವಾಗಿಯೇ ಇವೆ. ಹೀರೋ ಆಗಲೂ ಸೈ, ವಿಲನ್ ಆಗಲೂ ರೆಡಿ ಎಂಬ ಮನಸ್ಥಿತಿಯಿಂದಲೇ ಸುದೀಪ್ ಎಲ್ಲರ ಮನ ಗೆದ್ದಿದ್ದಾರೆ. ತೆಲುಗು, ಹಿಂದಿ, ತಮಿಳು ಸೇರಿದಂತೆ ನಾನಾ ಭಾಷೆಗಳಲ್ಲಿಯೂ ಛಾಪು ಮೂಡಿಸಿದ್ದಾರೆ.

ತೆರೆ ಮೇಲೆ ಮಾತ್ರವಲ್ಲದೇ, ತೆರೆಯಾಚೆಗೂ ಹೀರೋ ಆಗಿಯೇ ಇರುವುದು ಸುದೀಪ್ ಸ್ಪೆಷಾಲಿಟಿ. ಬಲಗೈಲಿ ಕೊಟ್ಟಿದ್ದ ಎಡಗೈಗೆ ಗೊತ್ತಾಗಬಾರದು ಎಂಬಂತೆ ಸದಾ ಅಸಹಾಯಕರಿಗೆ ಸಹಾಯ ಮಾಡುತ್ತಾ, ಅಭಿಮಾನಿಗಳೀಗೂ ಮಾದರಿಯಾಗುತ್ತಾ ಮುಂದುವರೆಯುತ್ತಿರುವ ಸುದೀಪ್ ನಟನೆಯ ಬಹುನಿರೀಕ್ಷಿತ ‘ಪೈಲ್ವಾನ್’ ಚಿತ್ರ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top