fbpx
ಸಮಾಚಾರ

ಮತ್ತೆ ಭುಗಿಲೆದ್ದ ಪ್ರತ್ಯೇಕ ರಾಜ್ಯದ ಕೂಗು- ಉ.ಕರ್ನಾಟಕ ಪ್ರತ್ಯೇಕ ರಾಜ್ಯದ ಧ್ವಜಾರೋಹಣ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎನ್ನುವ ಹೋರಾಟದ ಕೂಗು ಮತ್ತೆ ಶುರುವಾಗಿದೆ.. ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿ ಮುಧೋಳ ನಗರದಲ್ಲಿರುವ ಉತ್ತರ ಕರ್ನಾಟಕ ಹೋರಾಟ ಸಮಿತಿ ಉಪಕಚೇರಿ ಆವರಣದಲ್ಲಿ ಇಂದು ಧ್ವಜಾರೋಹಣ ನೆರವೇರಿಸಲಾಗಿದೆ. ಕೇಸರಿ, ಹಳದಿ, ಹಸಿರು ಬಣ್ಣಗಳ ನಡುವೆ ರಾಜ್ಯದ 13 ಜಿಲೆಗಳಿರುವ ಚಿತ್ರವನ್ನು ನೀಲಿ ಬಣ್ಣದಲ್ಲಿ ರಚಿಸಲಾಗಿದೆ

ಕಳೆದ ಸಪ್ಟೆಂಬರ್ 23ರಂದು ಬಾಗಲಕೋಟೆಯಲ್ಲಿ ಸಭೆ ಸೇರಿದ್ದ ಹೋರಾಟ ಸಮಿತಿ ಸದಸ್ಯರು ಜನವರಿ 1ರಂದುಪ್ರತ್ಯೇಕ ಧ್ವಜಾರೋಹಣ ಮಾಡಬೇಕೆಂದು ನಿರ್ಣಯ ತೆಗೆದುಕೊಂಡಿದ್ದು ಆ ನಿರ್ಣಯವನ್ನು ಇಂದು ಜಾರಿಗೊಳಿಸಲಾಗಿದೆ./ಉತ್ತರ ಕರ್ನಾಟಕ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗೇಶ್ ಗೋಲಶೆಟ್ಟಿ ಸೇರಿ ಅನೇಕರು ಈ ಸಮಯದಲ್ಲಿ ಹಾಜರಿದ್ದರು.

ಹೈದ್ರಾಬಾದ್‌ ಕರ್ನಾಟಕ, ಉತ್ತರ ಕರ್ನಾಟಕ ನಿರ್ಲಕ್ಷಿಸಲ್ಪಟ್ಟಿದ್ದು,ಈ ಹಿಂದೆ ಕರ್ನಾಟಕ ಏಕೀಕರಣಕ್ಕಾಗಿ ಉತ್ತರ ಕರ್ನಾಟಕದ ಜನತೆ ಸಾಕಷ್ಟು ಹೋರಾಟ ಮಾಡಿದ್ದರು. ಆದರೆ, ಸರ್ಕಾರದ ನಿರ್ಲಕ್ಷ್ಯದಿಂದಾಗಿ ಇಂದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬರುತ್ತಿದೆ.

ಉತ್ತರ ಕರ್ನಾಟಕದ ಹದಿಮೂರು ಜಿಲ್ಲೆಗಳು ಒಳಗೊಂಡ ನಕ್ಷೆಯನ್ನು ಧ್ವಜದ ಮಧ್ಯೆ ರೂಪಿಸಲಾಗಿದೆ. ಹಾಗೆಯೇ ಕೇಸರಿ ಬಣ್ಣ ಧೈರ್ಯ, ಶೌರ್ಯದ ಸಂಕೇತವಾದರೆ, ಹಳದಿ ಹೊಸತನದ ಸಂಕೇತ, ಹಸಿರು ಸಮೃದ್ಧಿಯ ಸಂಕೇತ ಹಾಗೂ ನೀಲಿ ವಿಶಾಲತೆಯ ಸಂಕೇತ ಎಂದು ಹೊಸ ಧ್ವಜದಲ್ಲಿ ಬಳಸಿರುವ ಬಣ್ಣಗಳ ಕುರಿತು ಹೋರಾಟಗಾರರು ತಿಳಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top