fbpx
ಮನೋರಂಜನೆ

ದಲಿತ, ಮುಸ್ಲಿಂ ಆಯ್ತು ‘ಹನುಮಂತ’ ಈಗ ಕ್ರಿಶ್ಚಿಯನ್ ಅಂತೇ.

ಜಾತಿ ಧರ್ಮಕ್ಕೂ ಮೀರಿ ಭಕ್ತರನ್ನು ಹೊಂದಿರುವ ಆಂಜನೇಯನಿಗೆ ಬಿಜೆಪಿ ನಾಯಕರ ಜಾತಿ ಕಾಟ ಹೆಚ್ಚಾಗಿದೆ. ಹನುಮಂತ ಯಾವ ಜಾತಿಗೆ ಸೇರಿದವರು ಎನ್ನುವ ಕುರಿತು ಭಾರತೀಯ ಜನತಾ ಪಕ್ಷದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದ್ದು, ಉತ್ತರ ಪ್ರದೇಶ ಬಿಜೆಪಿ ಸಚಿವರೊಬ್ಬರು ಇತ್ತೀಚಿಗೆ, ಹನುಮಂತ ದಲಿತನು ಅಲ್ಲ, ಮುಸ್ಲಿಮನೂ ಅಲ್ಲ, ಆತ ಜಾಟ್ ಎಂದು ಹೇಳಿಕೆ ನೀಡಿದ್ದರು.

ಕೆಲವು ದಿನಗಳ ಹಿಂದೆ ರಾಜಸ್ತಾನ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಹನುಮಂತನನ್ನು ‘ದಲಿತ’ ಎಂದು ಹೇಳಿದ್ದರು,. ಅನಂತರ ಬಿಜೆಪಿ ಮುಖಂಡ ಬಕ್ಕಲ್​ ನವಾಬ್ ಅವ್ರು ಹನುಮಾನ್ ‘ಮುಸ್ಲಿಂ’ ಎಂದಿದ್ದರು. ಆದರೆ ಇದೀಗ ಉತ್ತರ ಪ್ರದೇಶದ ಧಾರ್ಮಿಕ ವ್ಯವಹಾರಗಳ ಸಚಿವ ಲಕ್ಷ್ಮಿ ನಾರಾಯಣ್ ಚೌದರಿ ಆಂಜನೇಯ ದಲಿತನೂ ಅಲ್ಲ, ಮುಸ್ಲಿಮನೂ ಅಲ್ಲ. ಆತ ಜಾಟ್ ಸಮುದಾಯಕ್ಕೆ ಸೇರಿದವನು ಎಂದು ಹೇಳಿದ್ದರು.

ಇದರ ಬೆನ್ನಲ್ಲೇ ಹನುಮಂತ ದಲಿತನು ಅಲ್ಲ, ಮುಸ್ಲಿಂ ಕೂಡ ಅಲ್ಲ ಆತ ಕ್ರಿಶ್ಚಿಯನ್ ಆಗಿದ್ದನಾ ಎಂಬ ಪ್ರಶ್ನೆ ಗುಜರಾತಿನ ದೇವಸ್ಥಾನವೊಂದರಲ್ಲಿ ಉದ್ಭವಿಸಿದೆ. ಏಕೆಂದರೆ ದೇವಾಲಯದಲ್ಲಿ ಆಂಜನೇಯನಿಗೆ ಸಾಂತಾ ಕ್ಲಾಸ್​ ವೇಷ ಹಾಕಿದ್ದು. ಹೌದು, ಭಜರಂಗಿ ಹಾಕಿದ್ದ ಸಾಂತಾ ಕ್ಲಾಸನ ವೇಷದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

ಈ ಬಗ್ಗೆ ದೇವಸ್ಥಾನದ ಅರ್ಚಕರನ್ನು ಕೇಳಿದರೆ ಹೇಳೋದೇ ಬೇರೆ. ಹನುಮಂತನಿಗೆ ತೊಡಿಸಿರುವ ಕೆಂಪು ಉಲ್ಲನ್​ ಬಟ್ಟೆಯನ್ನ ಅಮೆರಿಕಾದಲ್ಲಿರುವ ಭಕ್ತರೊಬ್ಬರು ಕಳುಹಿಸಿದ್ದಂತೆ.ಅಲ್ಲದೆ ಈಗ ಧನುರ್ಮಾಸ ಇರುವುದರಿಂಗ ಈ ಭಾಗದಲ್ಲಿ ತುಂಬಾ ಚಳಿಯಾಗಿದೆಯಂತೆ. ಹಾಗಾಗಿ ದೇವರಿಗೆ ಚಳಿ ಆಗದಿರಲಿ ಎಂದು ಸಂತಾ ಕ್ಲಾಸ್ ವೇಷ ತೊಡಿಸಲಾಗಿದೆಯಂತೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top