fbpx
ಸಮಾಚಾರ

ರಕ್ಷಿತ್ ಶೆಟ್ಟಿಯನ್ನು ನೆನಪಿಸಿಕೊಂಡಳು ಕಿರಿಕ್ ಹುಡುಗಿ ‘ರಶ್ಮಿಕಾ’

ಸ್ಯಾಂಡಲ್ ವುಡ್’ನಲ್ಲಿ ಹಾಟೆಸ್ಟ್ ಜೋಡಿ ಎಂತಲೇ ಹೆಸರು ಪಡೆದಿದ್ದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಜೋಡಿ ಈಗ ಬ್ರೇಕಪ್ ಮಾಡ್ಕೊಂಡ್ ಇರೋ ವಿಚಾರ ಎಲ್ಲರಿಗೂ ಗೊತ್ತು., ಈ ಬಗ್ಗೆ ಕ್ಷಣಕ್ಕೊಂದರಂತೆ ಹೊರ ಬೀಳುತ್ತಿದ್ದ ರೂಮರ್‌ಗಳು, ಸಾಮಾಜಿಕ ಜಾಲತಾಣಗಳಲ್ಲಿನ ಟ್ರೋಲ್‌ಗಳು ಒಂದಷ್ಟು ದಿನ ಸಿಕ್ಕಾಪಟ್ಟೆ ಹರಿದಾಡಿತ್ತು. ಆದ್ರೆ ಸರ್ಪ್ರೈಸ್ ಅಂದ್ರೆ ರಶ್ಮಿಕಾ ಮಂದಣ್ಣ ಅವರು ರಕ್ಷಿತ್ ಶೆಟ್ಟಿಯನ್ನು ನೆನಪಿಸಿಕೊಂಡಿದ್ದಾರೆ.

ಹೌದು. ರಶ್ಮಿಕಾ ಅವರು ಮೊನ್ನೆ ತಮ್ಮ ಸಿನಿ ಜೀವನದ ಹಳೆಯ ನೆನಪುಗಳನ್ನೂ ಬಿಚ್ಚಿಟ್ಟಿದ್ದಾಳೆ.. ಡಿಸೆಂಬರ್ 30ಕ್ಕೆ ರಶ್ಮಿಕಾ ನಟನೆಯ ಮೊದಲ ಸಿನಿಮಾ ಕಿರಿಕ್ ಪಾರ್ಟಿ ಸಿನಿಮಾ ತೆರೆಕಂಡು ಎರಡು ವರ್ಷ ಪೂರೈಸಿದೆ. ಹಾಗಾಗಿ 2017-18ನೇ ಇಸವಿಯಲ್ಲಿ ಜೊತೆಯಿದ್ದ ಸ್ಯಾಂಡಲ್ ವುಡ್ ಸ್ಟಾರ್ಸ್ ಹಾಗೂ ಗೆಳೆಯರ ಜೊತೆಗಿನ ಫೋಟೋಗಳನ್ನು ಕೊಲಾಜ್ ಮಾಡಿ ಫೋಟೋ ಸಮೇತ ಟ್ವೀಟ್ ಮಾಡಿದ್ದಾರೆ.

ಆಶ್ಚರ್ಯ ಅಂದ್ರೆ ರಕ್ಷಿತ್ ಶೆಟ್ಟಿಯವರ ಫೋಟೋವನ್ನೂ ಕೂಡ ಪ್ರಕಟಿಸಿದ್ದಾರೆ. “2 ವರ್ಷದ ನನ್ನ ನೆನಪುಗಳು” ಅಂತ ಬರೆದುಕೊಂಡಿದ್ದಾರೆ. ಅದೇನೇ ಇರಲಿ, ರಶ್ಮಿಕಾ ಫೋಟೋವನ್ನು ನೋಡಿ ಅಭಿಮಾನಿಗಳಂತೂ ಥ್ರಿಲ್ ಆಗಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top