fbpx
ಸಮಾಚಾರ

ಬಂಧನದ ಭೀತಿಯಲ್ಲಿ ಪ್ರೊ.ಕೆ.ಎಸ್.ಭಗವಾನ್ – ಇನ್ನೆರೆಡು ದಿನಗಳಲ್ಲಿ ಅರೆಸ್ಟ್ ಅಗಲಿದ್ದಾರಂತೆ ಪ್ರೊ. ಭಗವಾನ್

ಸದಾ ಒಂದಲ್ಲ ಒಂದು ವಿವಾದಗಳನ್ನು ತನ್ನ ಮೇಲೆ ಹಾಕಿಕೊಳ್ಳುವ ಪ್ರೊ.ಕೆ.ಎಸ್.ಭಗವಾನ್ ತಿರುಳಿಲ್ಲದ ಹಾಗೂ ಹಿಂದೂ ಭಾವನೆಗಳಿಗೆ ದಕ್ಕೆ ತರುವ ಹೇಳಿಕೆಗಳನ್ನು ನೀಡಿ ಎಲ್ಲರ ಕೆಂಗೆಣ್ಣಿಗೆ ಗುರಿಯಾಗುತ್ತಲೇ ಇರುತ್ತಾರೆ.

ಹೀಗಾಗಿ ಪ್ರೊ.ಕೆ.ಎಸ್.ಭಗವಾನ್ ರವರ ತಲೆಬುಡವಿಲ್ಲದ ಹೇಳಿಕೆಗಳನ್ನು ಕಂಡ ಜನರು ಕೋಪೋದ್ರಿಕ್ತರಾಗಿದ್ದು, ಹಿಂದೂ ಜಾಗರಣೆ ವೇದಿಕೆ ಕಾರ್ಯಕರ್ತ ಜಗದೀಶ್​ ಹೆಬ್ಬಾಳ ಅವರು ಭಗವಾನ್ ವಿರುದ್ಧ ದೂರು ದಾಖಲಿಸಿದ್ದಾರೆ ಎನ್ನುವ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಹಿಂದೂ ಜಾಗರಣೆ ವೇದಿಕೆ ಕಾರ್ಯಕರ್ತ ಜಗದೀಶ್​ ಹೆಬ್ಬಾಳ ಅವರು ಭಗವಾನ್ ವಿರುದ್ಧ ದಾಖಲು ಮಾಡಿದ ದೂರಿನ ಪ್ರಕಾರ ಪೋಲಿಸಿನವರು ಪ್ರೊ.ಕೆ.ಎಸ್.ಭಗವಾನ್ ರವರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಒಟ್ಟಿನಲ್ಲಿ ಇದೀಗ ‘ರಾಮಮಂದಿರ ಯಾಕೆ ಬೇಕು’ ಎಂಬ ಪುಸ್ತಕದ ಮೂಲಕ ಮತ್ತೆ ವಿವಾದ ಎಬ್ಬಿಸಿರುವ ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಇನ್ನೆರಡು ದಿನಗಳಲ್ಲಿ ಬಂಧನವಾಗಲಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದ್ದು ಉನ್ನತ ಅಧಿಕಾರಿಗಳ ಸಲಹೆ ಪಡೆದು ಇನ್ನೆರಡು ದಿನಗಳಲ್ಲಿ ಪ್ರೊ.ಕೆ.ಎಸ್.ಭಗವಾನ್ ರವರನ್ನು ಪೊಲೀಸರು ಬಂಧಿಸುತ್ತಾರೆ ಎನ್ನುವ ಮಾತುಗಳು ಎಲ್ಲೆಡೆ ಕೇಳಿಬರುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top