fbpx
ಮನೋರಂಜನೆ

ರಜನಿಕಾಂತ್ ಸಿನಿಮಾಗೆ ಠಕ್ಕರ್ ಕೊಡಲು ಬರುತ್ತಿದ್ದಾರೆ ಲೂಸ್ ಮಾದ ಯೋಗಿ !

ಕೆಲ ದಿನಗಳಿಂದ ಸಿನಿಮಾದಿಂದ ದೂರ ಉಳಿದಿದ್ದ ನಟ ಲೂಸ್ ಮಾದ ಯೋಗಿ, ಇದೀಗ ಮತ್ತೆ ಕಮ್ ಬ್ಯಾಕ್ ಮಾಡಲಿದ್ದಾರೆ, ಹೌದು, ಲೂಸ್ ಮಾದ ಯೋಗಿ ನಟಿಸಿರುವ ಸಿನಿಮಾವಾದ ‘ಲಂಬೋದರ’ ಇನ್ನೇನು ತೆರಿಗೆ ಅಪ್ಪಳಿಸಲು ಸಿದ್ಧವಾಗಿದೆ.

ಲಂಬೋದರ ಸಿನಿಮಾದ ಮೂಲಕ ಮತ್ತೆ ಆರ್ಭಟಿಸಲು ಬರುತ್ತಿರುವ ಲೂಸಾ ಮಾದ ಯೋಗಿ ಅವರು ರಜನಿಕಾಂತ್ ಸಿನಿಮಾದೊಂದಿಗೆ ಪೈಪೋಟಿಗೆ ಇಳಿದ್ದಿದ್ದಾರೆ. ಹೇಗೆ ಅಂತೀರಾ? ಜನವರಿ 11 ರಂದು ರಾಜ್ಯಾದ್ಯಂತ ತೆರೆಕಾಣುತ್ತಿರುವ ಲೂಸ್ ಮಾದ ಅಭಿನಯದ ‘ಲಂಬೋದರ’ ಸಿನಿಮಾ ರಿಲೀಸ್ ಆಗುತ್ತಿರುವ ದಿನದಂದೇ ಸೂಪರ್ ಸ್ಟಾರ್ ರಜನಿಕಾಂತ್ ರವರ ಅಭಿನಯದ ‘ಪೇಟಾ’ ಸಿನಿಮಾ ಕೂಡ ರಿಲೀಸ್ ಆಗ್ತಿದೆ, ಹೀಗಾಗಿ ರಜನಿಕಾಂತ್ ರವರ ಪೇಟಾ ಸಿನಿಮಾಗೆ ಠಕ್ಕರ್ ಕೊಡಲು ಲೂಸ್ ಮಾದ ಯೋಗಿ ಸಿದ್ದವಾಗಿದ್ದರೆ.

‘ಸಿದ್ಲಿಂಗು’ ಲುಕ್​ನಲ್ಲಿ ವಾಪಾಸ್ಸಾಗಿರುವ ನಟ ಲೂಸ್ ಮಾದ ಯೋಗಿ, ಚಿತ್ರದ ಬಿಡುಗಡೆಯ ನಂತರ ಸದ್ದು ಮಾಡುತ್ತಾರಾ ನೋಡಬೇಕು.

ಒಟ್ಟಿನಲ್ಲಿ ಈ ಎರಡು ಚಿತ್ರಗಳಲ್ಲಿ ಯಾವ ಚಿತ್ರಕ್ಕೆ ಪ್ರೇಕ್ಷಕ ಮಹಾಶಯರು ಮಾರು ಹೋಗಲಿದ್ದಾರೋ ಇನ್ನಷ್ಟೇ ಕಾದು ನೋಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top