fbpx
ಮನೋರಂಜನೆ

ಹೊಸ ವರುಷದಂದು ತಿರುಪತಿಗೆ ತೆರಳಿದ ಕಿಚ್ಚ ಸುದೀಪ್

2018 ಕಳೆಯಿತು, ಹೊಸ ವರ್ಷ ಬಂದಿತು. ಹೌದು, ನಾವೆಲ್ಲರೂ ನೂತನ ವರ್ಷಕ್ಕೆ ಕಾಲಿಟ್ಟಿದ್ದೇವೆ! ಮೊದಲಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

ಹೊಸ ವರುಷ ಬಂದಿತೆಂದರೆ ಸಾಕು ಅದೇನೋ ಜೋಶ್, ಅದೇನೋ ಸಂತೋಷ ಎಲ್ಲರನ್ನು ಆವರಿಸಿಬಿಡುತ್ತದೆ. ಹೊಸ ವರುಷದ ಮೊದಲ ದಿನವನ್ನು ದೇವಸ್ಥಾನಗಳಿಗೆ ಭೇಟಿ ಕೊಟ್ಟು ಸ್ವಾಗತಿಸುವುದು ಬಹಳ ಹಿಂದಿನಿಂದ ಬಂದಿರುವ ರೂಢಿ. ಇದೀಗ ಈ ಪದ್ದತಿಯನ್ನು ಕಿಚ್ಚ ಸುದೀಪ್ ರವರು ಅನುಸರಿಸಿದ್ದು. ಕಿಚ್ಚ ಸುದೀಪ್ ಹೊಸ ವರುಷದ ಮೊದಲ ದಿನದಂದು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದಿದ್ದಾರೆ.

ಅಂದಹಾಗೆ, ಕಿಚ್ಚ ಸುದೀಪ್ ಭೇಟಿ ನೀಡಿದ್ದು ತಿರುಪತಿಯ ತಿಮ್ಮಪ್ಪನ ದೇವಾಲಯಕ್ಕೆ. ವೆಂಕಟೇಶ್ವರನ ದಿವ್ಯ ಸನ್ನಿಧಿಗೆ ಭೇಟಿ ನೀಡಿದ ಕಿಚ್ಚ ಸುದೀಪ್ ಪ್ರಾರ್ಥನೆ ಸಲ್ಲಿಸಿ ಬಂದಿದ್ದಾರೆ.

ಜೊತೆಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕಿಚ್ಚ ಸುದೀಪ್ ಎಲ್ಲರಿಗೂ ಹೊಸ ವರುಷದ ಶುಭಾಶಯವನ್ನು ತಿಳಿಸಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top