fbpx
ಮನೋರಂಜನೆ

ಹೊಸ ವರ್ಷದ ಆರಂಭದಲ್ಲೇ ಸೂತಕದ ಛಾಯೆ- ಪ್ರಸಿದ್ಧ ಹಿರಿಯ ನಟ ಖಾದರ್ ಖಾನ್ ವಿಧಿವಶ.

ಹೊಸ ವರ್ಷದ ಆರಂಭದಲ್ಲೇ ಬಾಲಿವುಡ್‌ನಲ್ಲಿ ಸೂತಕದ ಛಾಯೆ ಮನೆ ಮಾಡಿದೆ. ಮೆದುಳು ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಬಾಲಿವುಡ್‌ನ ಮೇರು ನಟ ಖಾದರ್ ಖಾನ್ ತಮ್ಮ 81 ನೆ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಡಿಸೆಂಬರ್ 31ರ ಸಂಜೆ 6 ಗಂಟೆಗೆ ಖದರ್ ಖಾನ್ ವಿಧಿವಶರಾಗಿದ್ದಾರೆ ಎಂದು ಅವರ ಮಗ ಖಚಿತಪಡಿಸಿದ್ದಾರೆ.

“ನಮ್ಮ ತಂದೆ ನಮ್ಮನ್ನು ಅಗಲಿ ಬಾರದ ಲೋಕಕ್ಕೆ ತೆರಳಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಕೆನಾಡದ ಆಸ್ಪತ್ರೆಯಲ್ಲಿ ಕಳೆದ ಕೆಲ ದಿನಗಳಿಂದ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು.. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶಾತರಾಗಿದ್ದಾರೆ. ತಂದೆಯವರ ಅಂತ್ಯಕ್ರಿಯೆಯನ್ನು ಕೆನಾಡದಲ್ಲಿ ನಡೆಸಲು ಕುಟುಂಬಸ್ಥರೆಲ್ಲರು ತೀರ್ಮಾನಿಸಿದ್ದೇವೆ. ನಮ್ಮ ತಂದೆ ಆರೋಗ್ಯ ವೃದ್ಧಿಯಾಗಲೆಂದು ದೇಶಾದ್ಯಂತ ಅಭಿಮಾನಿಗಳು ಪ್ರಾರ್ಥನೆಯಲ್ಲಿ ತೊಡಗಿಕೊಂಡಿದ್ದರು. ತಂದೆಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ” ಎಂದು ಖಾದರ್ ಖಾನ್ ಪುತ್ರ ಸರ್ಫರಾಜ್ ತಿಳಿಸಿದ್ದಾರೆ.

300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಖಾದರ್‌,973ರಲ್ಲಿ ತೆರೆಕಂಡ ರಾಜೇಶ್ ಖನ್ನಾ ನಟನೆಯ ದಾಗ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. . ನಟನೆ ಆರಂಭಿಸುವ ಮೊದಲು ಸಂಭಾಷಣಾಕಾರರಾಗಿ ಗುರುತಿಸಿಕೊಂಡಿದ್ದ ಅವರು 250ಕ್ಕೂ ಹಚ್ಚು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. ‘ಜವಾನಿ ದಿವಾನಿ’ ಇವರು ಸಂಭಾಷಣೆ ಬರೆದ ಮೊದಲ ಚಿತ್ರ.

ಧರಮ್ ವೀರ್, ಗಂಗಾ ಜಮುನಾ ಸರಸ್ವತಿ, ಕೂಲಿ, ದೇಶ್ ಪ್ರೇಮಿ, ಸುಹಾಗ್, ಪರವರೀಶ್, ಶರಾಬಿ, ಜ್ವಾಲಾಮುಖಿ, ಅಮರ್ ಅಕ್ಬರ್ ಆಂಥೋಣಿ, ಲಾವಾರಿಶ್, ಮುಖಾದರ್ ಕಿ ಸಿಕಂದರ್ ಇವು ಖಾದರ್ ನಟಿಸಿರುವ ಹೆಸರಾಂತ ಚಿತ್ರಗಳು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top