fbpx
ಸಿನಿಮಾ

ಪ್ರೀತಿಯ ಅಪ್ಪಾಜಿಯ ಅಂತ್ಯ ಸಂಸ್ಕಾರಕ್ಕೆ ಬರಲು ದರ್ಶನ್ ಖರ್ಚು ಮಾಡಿದ್ದೆಷ್ಟು ?

ರೆಬೆಲ್ ಸ್ಟಾರ್ ಅಂಬರೀಶ್ ನಿಧನರಾದಾಗ ಅವರನ್ನು ಅಪ್ಪಾಜಿಯೆಂದೇ ಕರೆಯುತ್ತಿದ್ದ ಹಾಗೂ ಅಂಬಿಯನ್ನು ತನ್ನ ತಂದೆ ಎಂದೇ ಭಾವಿಸಿದ್ದ ನಟ ದರ್ಶನ ಯಜಮಾನ ಚಿತ್ರದ ಶೂಟಿಂಗ್ ಗಾಗಿ ಸ್ವೀಡನ್‍ನಲ್ಲಿದ್ದರು , ವಿಷಯ ಕೇಳುತ್ತಿದ್ದಂತೆ ಆಘಾತಕ್ಕೆ ಒಳಗಾದ ನಟ ದರ್ಶನ್ ಅಂಬಿಯನ್ನು ನೋಡಲು ಸ್ವೀಡನ್ ನಿಂದ ತಕ್ಷಣವೇ ಹೊರಟು ಅಂಬರೀಶ್ ರವರ ಅಂತಿಮ ಸಂಸ್ಕಾರದಲ್ಲಿ ಭಾಗಿಯಾದರು.

ಆದರೆ, ಸ್ವೀಡನ್‍ನಿಂದ ಬೆಂಗಳೂರಿಗೆ ತಕ್ಷಣ ಹೊರಟು ಬರುವುದು ಸುಲಭವಾಗಿರಲಿಲ್ಲ. ಭಾರತ ಮತ್ತು ಸ್ವೀಡನ್ ನಡುವೆ ಸುಮಾರು 7000 ಕಿ.ಮೀ ಗಾಲ ಅಂತರವಿದೆ ಹಾಗೂ ಸಂಚಾರ ಕಡಿಮೆ. ಹೀಗಾಗಿ ವಿಮಾನಗಳೂ ಕಡಿಮೆ. ಟಿಕೆಟ್ ಸಿಗುವುದಿಲ್ಲ. ವಿಷಯ ಗೊತ್ತಾದ ಕ್ಷಣದಿಂದ ಚಡಪಡಿಸುತ್ತಿದ್ದ ದರ್ಶನ್, ಪತ್ನಿ ವಿಜಯಲಕ್ಷ್ಮಿಯನ್ನು ತಕ್ಷಣ ಅಂಬಿ ಮನೆಗೆ ಕಳಿಸಿದರು. ಸುಮಲತಾರನ್ನು ಬಿಟ್ಟು ಹೋಗದಂತೆ ಸೂಚಿಸಿದರು. ಇತ್ತ ನಾವು ಟಿಕೆಟ್ ಹೊಂದಿಸಲು ಒದ್ದಾಡುತ್ತಿದ್ದೆವು ಎಂದು ಆ ದಿನದ ಘಟನೆ ಹೇಳಿದ್ದಾರೆ ಯಜಮಾನ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್.

ಸ್ವೀಡನ್‍ನಿಂದ ಫ್ಲೈಟ್ ಸಿಗದೆ ಸ್ವೀಡನ್‍ನಿಂದ ದುಬೈಗೆ ಒಂದು, ದುಬೈನಿಂದ ಬೆಂಗಳೂರಿಗೆ ಒಂದು ಫ್ಲೈಟ ಬುಕ್ ಮಾಡಿದ್ರು. ಬೇರೆ ಮಾರ್ಗವೇ ಇರಲಿಲ್ಲ. ದುಬೈನಲ್ಲಿ ಬೆಂಗಳೂರಿನ ವಿಮಾನಕ್ಕಾಗಿಯೇ 4 ಗಂಟೆ ಕಾಯಬೇಕಾಯ್ತು. ಎಮರ್ಜೆನ್ಸಿಯಲ್ಲಿ ಟಿಕೆಟ್ ಬುಕ್ ಮಾಡಿದ್ದರಿಂದಾಗಿ 4 ಲಕ್ಷ ರೂ. ಖರ್ಚಾಯ್ತು. ಹಣ ಮುಖ್ಯವಾಗಿರಲಿಲ್ಲ ಎಂದು ಹೇಳಿದ್ದಾರೆ ಶೈಲಜಾ ನಾಗ್.

ಸ್ವೀಡನ್‍ನಲ್ಲಿ ನಡೆಯಬೇಕಿದ್ದ ಯಜಮಾನ ಚಿತ್ರದ ಇನ್ನೊಂದು ಹಾಡನ್ನು ಬೆಂಗಳೂರಿನಲ್ಲೇ ಚಿತ್ರೀಕರಿಸಲು ಚಿತ್ರತಂಡ ನಿರ್ಧರಿಸಿದೆ. ಇಡೀ ಚಿತ್ರತಂಡ ಈಗ ಬೆಂಗಳೂರಿಗೆ ವಾಪಸ್ ಆಗಿದೆ. ಜನವರಿ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top