fbpx
ಮನೋರಂಜನೆ

ಕಾಸ್ಟಿಂಗ್ ಕೌಚ್ ಅನ್ನೋದು ಬಲಾತ್ಕಾರವಲ್ಲ, ಒಂಥರಾ ಒಪ್ಪಂದ- ಪವಿತ್ರ ಲೋಕೇಶ್ ಅಚ್ಚರಿಯ ಹೇಳಿಕೆ.

ಸಿನಿಮಾಗಳಲ್ಲಿ ನಟಿಸಲು ಅವಕಾಶ ಕೊಡುವ ಆಮಿಷವೊಡ್ಡಿ ನಟಿಯರನ್ನು ಮಂಚಕ್ಕೆ ಆಹ್ವಾನಿಸುವ ಕಾಯಿಲೆ ಎಲ್ಲ ಚಿತ್ರರಂಗಗಳಿಗೂ ಸಾಂಕ್ರಾಮಿಕವಾಗಿ ಹರಡಿರೋ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಇಂಥ ಕಾಸ್ಟ್ ಕೌಚಿಂಗ್‌ನ ಸರಣಿ ಇದೀಗ ಎಲ್ಲೆಲ್ಲಿಯೋ ಬಿಚ್ಚಿಕೊಳ್ಳುತ್ತಿವೆ. ಇತ್ತೀಚಿನ ದಿನಗಳಲ್ಲಿ ದೇಶವ್ಯಾಪಿ ಭಾರಿ ಚರ್ಚೆಯನ್ನು ಹುಟ್ಟುಹಾಕಿರುವ ಇಂತಹ ಅನಿಷ್ಟ ಪಿಡುಗಿನ ವಿರುದ್ಧ ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ಭಾಷೆಯ ಪ್ರಸಿದ್ಧ ಯುವ ನಟಿಯರನೇಕರು ತಾವೇ ಅನುಭವಿಸಿದ್ದ ಕಾಸ್ಟಿಂಗ್ ಕೌಚ್ ಮನೋ ವ್ಯಾಕುಲವನ್ನು ಸಾಂದರ್ಭಿಕವಾಗಿ ಬಿಚ್ಚಿಡುತ್ತಿದ್ದಾರೆ.

ಇತ್ತೀಚಿಗೆ ಕಾಸ್ಟಿಂಗ್ ಕೌಚ್ ವಿರುದ್ಧ ರೊಚ್ಚಿಗೆದ್ದು ನಡುರಸ್ತೆಯಲ್ಲಿ ಬಟ್ಟೆಗಳನ್ನು ಬಿಚ್ಚಿ ಅರೆ ಬೆತ್ತಲೆ ಪ್ರತಿಭಟನೆ ನಡೆಸಿದೇಟಿಗೆ ತೆಲುಗು ಚಿತ್ರರಂಗದೊಳಗೆ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿ ಇಡೀ ದೇಶದಾದ್ಯಂತ ಸುದ್ದಿಗೆ ಗ್ರಾಸವಾಗಿತ್ತು. ಅದಾದೇಟಿಗೆ ಹಲವು ಚಿತ್ರರಂಗದ ನಟಿಯರೂ ಕೂಡ ಚಿತ್ರರಂಗದಲ್ಲಿ ತಮಗಾಗುತ್ತಿರುವ ಚಿತಾಹಿಂಸೆಯನ್ನು ಒಂದರ ಹಿಂದೊಂದರಂತೆ ಬಿಚ್ಚಿಡುತ್ತಾ ಬಂದಿದ್ದಾರೆ. ಇದೀಗ ಹಿರಿಯ ಪೋಷಕ ನಟಿಯಾಗಿರುವ ಪವಿತ್ರ ಲೋಕೇಶ್ ಅವರು ಈ ಮಂಚಕ್ಕೆ ಕರೆಯುವ ಕಾಯಿಲೆಯ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

 

 

ಇತ್ತೀಚಿಗೆ ಖಾಸಗಿ ಚಾನೆಲ್’ವೊಂದರ ಸಂದರ್ಶನದಲ್ಲಿ ಪಾಲ್ಗೊಂಡು ಚಿತ್ರರಂಗದಲ್ಲಿ ಈಗಲೂ ಕಾಸ್ಟಿಂಗ್ ನಡೆಯುತ್ತಿದೆ ಎನ್ನುವುದನ್ನು ಒಪ್ಪಿಕೊಂಡ ಪವಿತ್ರ “ಕಾಸ್ಟಿಂಗ್ ಕೌಚ್ ಅನ್ನೋದು ಬಲಾತ್ಕಾರವಲ್ಲ, ಅದು ಒಪ್ಪಂದ” ಎನ್ನುವಂತ ಮಾತುಗಳನ್ನಾಡಿದ್ದಾರೆ.

“ಕಾಸ್ಟಿಂಗ್ ಕೌಚ್ ಎನ್ನುವುದು ಅತ್ಯಂತ ಸೂಕ್ಷ್ಮ ವಿಚಾರ, ಚಿತ್ರರಂಗಕ್ಕೆ ಕಾಲಿಡುವ ಆರಂಭದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಾಕಷ್ಟು ನಟಿಯರು ನಮ್ಮ ಸುತ್ತ ಇದ್ದಾರೆ.. ಇದು ಚಿತ್ರರಂಗಕ್ಕೆ ಆವರಿಸಿಕೊಂಡಿರುವ ದೊಡ್ಡ ಸಮಸ್ಯೆ. ಹಾಗಂತ ಇದು ಕೇವಲ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಸಾಫ್ಟ್’ವೇರ್​ ಕಂಪನಿ, ರಾಜಕೀಯ​​ ಸೇರಿದಂತೆ ಬಹುತೇಕ ಎಲ್ಲಾ ಕ್ಷೇತ್ರಗಳಿಗೂ ಹರಡಿಕೊಂಡಿದೆ. ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರನ್ನು ದೈಹಿಕವಾಗಿ ದುರುಪಯೋಗ ಪಡಿಸಿಕೊಳ್ಳುವುದನ್ನು ನಾವು ನೀವೆಲ್ಲಾ ನೋಡುತ್ತಿರುತ್ತೇವೆ. ಆದರೆ ಮಹಿಳೆಯರು ಇಂಥವುಗಳನ್ನು ವಿರೋಧಿಸಬೇಕು.”

“ಏನೋ ಒಂದು ಆಮಿಷವನ್ನು ಒಡ್ಡಿ ಮಂಚಕ್ಕೆ ಕರೆಯುವವರಿಗೆ ನೀವು ಸಮ್ಮತಿಸದಿದ್ದರೆ ಅಲ್ಲಿ ಕಾಸ್ಟಿಂಗ್ ಕೌಚ್ ನಡೆಯುವುದೇ ಇಲ್ಲ. ಒಂದೊಮ್ಮೆ ನೀವೇನಾದರೂ ಆತನ ಕಂಡೀಷನ್ನುಗಳಿಗೆ ಒಪ್ಪಿಕೊಂಡರೆ, ನಿಮ್ಮ ಲಾಭಕ್ಕಾಗಿ ಒಪ್ಪಿಕೊಂಡಿದೀರಿ ಅಂತಾಗುತ್ತೆ. ಅವಕಾಶಕ್ಕಾಗಿ ಕಾಸ್ಟಿಂಗ್ ಕೌಚ್’ಗೆ ಒಪ್ಪಿಕೊಳ್ಳುವುದು ಒಂದು ರೀತಿ ಒಪ್ಪಂದವಿದ್ದಹಾಗೆ., ಇಲ್ಲಿ ಆಕೆ ಒಪ್ಪಿಕೊಂಡರೆ ಮಾತ್ರ ತಾನೇ ಕೌಸ್ಟಿಂಗ್ ಕೌಚ್ ನಡೆಯೋಕೆ ಸಾಧ್ಯ. ಒಪ್ಪಿಕೊಳ್ಳದಿದ್ದರೆ ಹೇಗೆ ನಡೆಯುತ್ತೆ.. ಹಾಗಾಗಿ ಇದು ದೌರ್ಜನ್ಯ, ಬಲಾತ್ಕಾರ ಇನ್ನೊಂದೇನೋ ಅಲ್ಲ. ಇಂದು ಒಂಥರಾ ಒಪ್ಪಂದ” ಎಂದು ಹೇಳುತ್ತಾರೆ ಪವಿತ್ರ ಲೋಕೇಶ್.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top