fbpx
ಮನೋರಂಜನೆ

ಸದ್ದು ಮಾಡದೇ ಸುದ್ದಿಯಾಗದೇ ಸೈಲೆಂಟಾಗಿ ಮದುವೆ ಮಾಡಿಕೊಂಡ ಎಕ್ಸ್‌ಕ್ಯೂಸ್ ಮಿ ಸುನೀಲ್ ರಾವ್- ಹುಡುಗಿ ಯಾರು ಗೊತ್ತಾ?

ಪ್ರೇಮ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಎಕ್ಸ್‌ಕ್ಯೂಸ್ ಮಿ ಚಿತ್ರದ ಮೂಲಕ ಪ್ರವರ್ಧಮಾನಕ್ಕೆ ಬಂದಿದ್ದಾತ ಸುನಿಲ್ ರಾವ್.. ಬಾಲನಟನಾಗಿ, ಗಾಯಕನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಸುನಿಲ್ಎಕ್ಸ್‌ಕ್ಯೂಸ್ ಮಿ ಚಿತ್ರದ ನಂತರ ದಿನಗಳಲ್ಲಿ ಚಪ್ಪಾಳೆ,ಬಾ ಬಾರೋ ರಸಿಕ, ಪ್ರೀತಿ ಪ್ರೇಮ ಪ್ರಣಯ ಸೇರಿದಂತೆ ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿದರಾದರೂ ಅದೃಷ್ಟ ಕೈಕೊಟ್ಟ ಕಾರಣವೋ ಏನೋ ಸಂಪೂರ್ಣವಾಗಿ ತೆರೆಮರೆಗೆ ಸರಿದಿದ್ದರು. ಆಗೊಮ್ಮೆ ಹೀಗೊಮ್ಮೆ ಸಿನಿಮಾ, ವೆಬ್ ಸೀರಿಸ್ ಅಂತ ಮಗ್ನನಾಗಿದ್ದ ಸುನಿಲ್ ಇದೀಗ ಸೈಲೆಂಟಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

 

 

ಬಹುದಿನಗಳಿಂದ ಪ್ರೀತಿಸುತ್ತಿದ್ದ ಪ್ರೇಯಸಿ ಶ್ರೇಯಾ ಅಯ್ಯರ್ ಅವರ ಜೊತೆ ಸುನಿಲ್ ರಾವ್ ಮದುವೆ ಮಾಡಿಕೊಡಿದ್ದಾರೆ.. ವೃತ್ತಿಯಲ್ಲಿ ಶ್ರೇಯಾ ಅಯ್ಯರ್ ವಸ್ತ್ರ ವಿನ್ಯಾಸಕಿಯಾಗಿದ್ದು ಸುನೀಲ್ ಅಭಿನಯದ ಲೂಸ್ ಕನೆಕ್ಷನ್ ವೆಬ್ ಸೀರಿಸ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ಸದ್ಯ ಮನೋಜ್ ನಟಿಸುತ್ತಿರುವ ‘ಟಕ್ಕರ್’ ಸಿನಿಮಾಗೂ ಇವರೇ ವಸ್ತ್ರ ವಿನ್ಯಾಸ ಮಾಡುತ್ತಿದ್ದಾರೆ.

ಲೂಸ್ ಕನೆಕ್ಷನ್ ವೆಬ್ ಸೀರಿಸ್ ಚಿತ್ರೀಕರಣದ ಸಮಯದಲ್ಲಿ ಶ್ರೇಯಾ ಐಯ್ಯರ್ ಹಾಗೂ ಸುನೀಲ್ ರಾವ್ ನಡುವೆ ಪರಿಚಯವಾಗಿತ್ತು. ನಂತರ ಪರಿಚಯ ಸ್ನೇಹಕ್ಕೆ, ಸ್ನೇಹ ಪ್ರೀತಿಗೆ ತಿರುಗಿ ಅಂತಿಮವಾಗಿ ಎರಡೂ ಕುಟುಂಬದವರನ್ನು ಒಪ್ಪಿಸಿ ಶಾಸ್ತ್ರೋಕ್ತವಾಗಿ ಮದುವೆ ಮಾಡಿಕೊಂಡಿದ್ದಾರೆ.ಬೆಂಗಳೂರಿನ ಜೆಪಿ ನಗರದಲ್ಲಿ ಶ್ರೇಯಾ-ಸುನೀಲ್ ಮದುವೆ ನಡೆದಿದೆ. ಎರಡೂ ಕುಟುಂಬದ ಸದಸ್ಯರು, ಸಂಭಂದಿಗಳು, ಮದುವೆಯಲ್ಲಿ ಭಾಗಿಯಾಗಿಯಾಗಿದ್ದಾರೆ. ಚಿತ್ರರಂಗದಲ್ಲಿ ಸುನಿಲ್’ಗೆ ಪರಿಚಯವಿರುವ ಕೆಲವು ಸ್ನೇಹಿತರೂ ಕೂಡ ಮದೇವ್ಗೆ ಬಂದು ಮದುಮಕ್ಕಳಿಗೆ ಹರಸಿ ಹೋಗಿದ್ದಾರೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top