ಭವಿಷ್ಯ

ಗಂಡ ಹೆಂಡತಿ ನಡುವೆ ಯಾವುದೇ ಜಗಳ ಇಲ್ಲದೆ ಜೀವನದಲ್ಲಿ ತುಂಬಾ ಸಂತೋಷವಾಗಿ ಶಾಂತಿ ನೆಮ್ಮದಿಯಿಂದ ಇರಬೇಕಂದ್ರೆ ಮಲಗುವ ಕೋಣೆಗೆ ಹೀಗಿದ್ರೆ ಚನ್ನ ಅನ್ನುತ್ತೆ ವಾಸ್ತು ಶಾಸ್ತ್ರ !

ಗಂಡ ಹೆಂಡತಿ ನಡುವೆ ಯಾವುದೇ ಜಗಳ ಇಲ್ಲದೆ ಜೀವನದಲ್ಲಿ

ತುಂಬಾ ಸಂತೋಷವಾಗಿ ಶಾಂತಿ ನೆಮ್ಮದಿಯಿಂದ ಇರಬೇಕಂದ್ರೆ

ಮಲಗುವ ಕೋಣೆಗೆ ಹೀಗಿದ್ರೆ ಚನ್ನ ಅನ್ನುತ್ತೆ ವಾಸ್ತು ಶಾಸ್ತ್ರ !

 

 

 

ಮನುಷ್ಯ ಮನೆಯಲ್ಲಿ ಕಾಲ ಕಳೆಯುವ ಹೆಚ್ಚಿನ ಸಮಯವನ್ನು ಮಲಗುವ ಕೋಣೆಯಲ್ಲಿ ಹೆಚ್ಚಿನ  ಸಮಯವನ್ನು ಕಳೆಯುತ್ತಾನೆ.

ಆದ್ದರಿಂದ ಮಲಗುವ ಕೋಣೆಯನ್ನು ಯಾವಾಗಲೂ ಸ್ವಚ್ಛವಾಗಿ,ಅಂದವಾಗಿ, ವಿಶಾಲವಾಗಿ, ಶುದ್ಧವಾದ ಗಾಳಿ, ಪ್ರಕಾಶಮಾನವಾದ ಸೂರ್ಯನ ಬೆಳಕು  ಬರುವಂತೆ  ವಾಸ್ತು ಪ್ರಕಾರ ಸರಿಯಾದ ಜಾಗದಲ್ಲಿ ನಿರ್ಮಿಸಿಕೊಂಡರೆ ಒಳ್ಳೆಯ ವಿಶ್ರಾಂತಿಯ ಜೊತೆಗೆ ಮನಸ್ಸಿಗೆ ಶಾಂತಿಯೂ ಸಹ ದೊರೆಯುತ್ತದೆ.

ಮುಖ್ಯವಾಗಿ ಈ ವಾಸ್ತು ಪ್ರಕಾರ ಇರುವ ಮಲಗುವ ಕೋಣೆಯಲ್ಲಿ ಮನೆಯ ಯಜಮಾನನು ಮಲಗಿದರೆ ಪರಿವಾರದವರ ಆರೋಗ್ಯ ಸಹ ಚೆನ್ನಾಗಿ ಇರುತ್ತದೆ. ಆದ್ದರಿಂದ ಮಲಗುವ ಕೋಣೆಯನ್ನು ನಿರ್ಮಿಸುವಾಗ ಕೆಲವು ಮುಖ್ಯವಾದ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.

 

 

ಹೀಗೆ ವಾಸ್ತು ಪ್ರಕಾರ ಮಲಗುವ ಕೋಣೆಯನ್ನು ನಿರ್ಮಿಸಿಕೊಳ್ಳುವುದರಿಂದ ನಿಮ್ಮ ಜೀವನದಲ್ಲಿ ಅಭಿವೃದ್ಧಿ, ಸುಖ, ಶಾಂತಿ, ಒಳ್ಳೆಯ ಆರೋಗ್ಯ ತಾನಾಗಿಯೇ ಬರುವುದು.

ಮನೆಯ ಯಜಮಾನನು  ಮಲಗುವ ಕೋಣೆ ಯಾವಾಗಲೂ ನೈರುತ್ಯ ದಿಕ್ಕಿನಲ್ಲಿಯೇ ಇರಬೇಕು. ಅಂದರೆ ದಕ್ಷಿಣ ಪಶ್ಚಿಮ ದಿಕ್ಕಿಗೆ ಇರಬೇಕು. ಅಷ್ಟೇ ಅಲ್ಲದೆ ಈ ಮಲಗುವ ಕೋಣೆ ಮಕ್ಕಳ ಕೋಣೆಗಳಿಗಿಂತಲೂ ವಿಶಾಲವಾಗಿ ಇದ್ದರೆ ಒಳ್ಳೆಯದು.

ಮಲಗುವ ಕೋಣೆಯನ್ನು ಮನೆಯ ಮಧ್ಯ ಭಾಗದಲ್ಲಿ ಎಂದಿಗೂ ಸಹ ನಿರ್ಮಿಸಬಾರದು .

 

 

ಮಲಗುವ ಕೋಣೆಯ ಬಾಗಿಲು  ಮುಚ್ಚುವಾಗ ಮತ್ತು ತೆರೆಯುವಾಗ ಯಾವುದೇ ಧ್ವನಿಯನ್ನು ಮಾಡಬಾರದು ಆ ರೀತಿ ನೋಡಿಕೊಳ್ಳಿ .

ನೀವು ಮಲಗುವ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಟಿವಿ ನಿಮ್ಮ ಲ್ಯಾಪ್ ಟಾಪ್ ,ಕಂಪ್ಯೂಟರ್ ಇವುಗಳನ್ನು ಬಳಸುವುದನ್ನು ಅಥವಾ ಅಲ್ಲಿಯೇ ಇಡುವುದನ್ನು ತಡೆಗಟ್ಟಿ.

ವಾಸ್ತುವಿನ ಪ್ರಕಾರ ಮಲಗುವ ಕೋಣೆಗೆ ಬಿಳಿ ಅಥವಾ ಹಳದಿ ಬಣ್ಣವನ್ನು ಉಪಯೋಗಿಸಬೇಕು .

 

 

ಸಾಮಾನ್ಯವಾಗಿ ಮಲಗುವ ಕೋಣೆಯ ಹೊರಗೆ ಒಂದು ಉದ್ಯಾನವನ ಅಥವಾ ಕೆಲವು ಗಿಡಗಳನ್ನು ಬೆಳೆಸಿದರೆ ಅದು ನಕಾರಾತ್ಮಕ ಶಕ್ತಿಯನ್ನು ಮಲಗುವ ಕೋಣೆಯೊಳಗೆ ಬರದಂತೆ ತಡೆಗಟ್ಟುತ್ತದೆ .

ವಾಸ್ತುಶಾಸ್ತ್ರದ ಪ್ರಕಾರ ಮಲಗುವ ಕೋಣೆ ಪೂರ್ತಿಯಾಗಿ ತೆರೆದಿರಬಾರದು. ಮಲಗುವ ಕೋಣೆಗೆ ಪ್ರವೇಶಿಸಿದಾಗ ಪ್ರಶಾಂತತೆ ಬರುವಂತೆ ನೋಡಿಕೊಳ್ಳಬೇಕು.

ಅದಕ್ಕಾಗಿ ನಿಮಗೆ ಇಷ್ಟವಾದ ಫೋಟೋಗಳು ಒಳ್ಳೆಯ ಚಿತ್ರಕಲೆಗಳು,  ಗೃಹ ಉಪಕರಣಗಳನ್ನು, ಇಡುವುದರಿಂದ ಸಂತೋಷವನ್ನು ನೀಡುತ್ತದೆ.

 

 

ಮಲಗುವ ಕೋಣೆಯಲ್ಲಿ ಯಾವುದೇ ಪರಿಸ್ಥಿತಿಯಲ್ಲಿಯೂ ಸಹ ಅಕ್ವೇರಿಯಂ ಮತ್ತು ದೇವರ ವಿಗ್ರಹಗಳು, ಗಿಡಗಳು ಇರದೆ ಇರುವ ಹಾಗೆ ನೋಡಿಕೊಳ್ಳಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top